ಇಸ್ರೇಲ್ | ಚೂರಿ ಇರಿತದಲ್ಲಿ 6 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಜೆರುಸಲೇಂ : ಇಸ್ರೇಲ್ನ್ ಹದೆರಾ ನಗರದಲ್ಲಿ ಬುಧವಾರ ನಡೆದ ಇರಿತ ದಾಳಿಯಲ್ಲಿ ಕನಿಷ್ಠ 6 ಮಂದಿ ಗಾಯಗೊಂಡಿದ್ದು ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
ಉತ್ತರದ ಹದೆರಾ ನಗರದ ವಿವಿಧೆಡೆ ದಾಳಿ ನಡೆದಿದ್ದು ಇದು ಭಯೋತ್ಪಾದಕ ಕೃತ್ಯವಾಗಿದೆ. ದಾಳಿ ನಡೆಸಿದ ಬಳಿಕ ಬೈಕ್ನದಲ್ಲಿ ಪರಾರಿಯಾಗಿದ್ದ ಆರೋಪಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ `ಜೆರುಸಲೇಂ ಪೋಸ್ಟ್' ವರದಿ ಮಾಡಿದೆ
Next Story





