ಇಸ್ರೇಲ್ ಸೇನೆಯಿಂದ ದಕ್ಷಿಣ ಲೆಬನಾನ್ ನಲ್ಲಿ ಹಿಝ್ಬುಲ್ಲಾ ನೆಲೆಗಳ ಮೇಲೆ Air Strike

Photo Credit : aljazeera.com
ಜೆರುಸಲೇಂ,ಡಿ.9: ದಕ್ಷಿಣ ಲೆಬನಾನ್ ನಲ್ಲಿನ ಹಿಝ್ಬುಲ್ಲಾ ಹೋರಾಟಗಾರರ ತರಬೇತಿ ತಾಣ ಹಾಗೂ ಅವರು ಕಾರ್ಯಾಚರಿಸುತ್ತಿದ್ದ ಸ್ಥಳಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.
ಹಿಝ್ಬುಲ್ಲಾ ಸಂಘಟನೆಯ ‘ರಾದ್ವಾನ್’ ಪಡೆಯ ತರಬೇತಿ ತಾಣ ಹಾಗೂ ಮಿಲಿಟರಿ ರಚನೆಗಳನ್ನು ಗುರಿಯಿರಿಸಿ ಈ ದಾಳಿಯನ್ನು ನಡೆಸಲಾಗಿದೆ ಎಂದು ಅದು ಹೇಳಿದೆ.
ಈ ತಾಣಗಳನ್ನು ಇಸ್ರೇಲ್ ದೇಶದ ವಿರುದ್ಧ ದಾಳಿ ನಡೆಸಲು ತರಬೇತಿ ಕೇಂದ್ರವಾಗಿ ಬಳಸಿಕೊಳ್ಳಲಾಗುತ್ತಿತ್ತು. ಇದು ಇಸ್ರೇಲ್ ಹಾಗೂ ಲೆಬನಾನ್ ನಡುವೆ ಏರ್ಪಟ್ಟಿರುವ ತಿಳುವಳಿಕಾ ಒಪ್ಪಂದದ ಉಲ್ಲಂಘನೆಯಾಗಿದೆ ಹಾಗೂ ಇಸ್ರೇಲ್ ದೇಶದ ವಿರುದ್ಧದ ಬೆದರಿಕೆಯಾಗಿದೆ ಎಂದವರು ತಿಳಿಸಿದ್ದಾರೆ.
Next Story





