ಏಡನ್ ಕೊಲ್ಲಿಯಲ್ಲಿ ಕಂಟೈನರ್ ಹಡಗಿನ ಮೇಲೆ ಕ್ಷಿಪಣಿ ದಾಳಿ
ಸಾಂದರ್ಭಿಕ ಚಿತ್ರ
ದುಬೈ : ಏಡನ್ ಕೊಲ್ಲಿಯ ಮೂಲಕ ಸಾಗುತ್ತಿದ್ದ ಕಂಟೈನರ್ ಹಡಗಿನ ಮೇಲೆ ಶನಿವಾರ ಕ್ಷಿಪಣಿ ದಾಳಿ ನಡೆದಿದ್ದು ಯೆಮನ್ ಮೂಲದ ಹೌದಿಗಳು ದಾಳಿ ನಡೆಸಿರುವುದಾಗಿ ಶಂಕಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಏಡನ್ನ ಆಗ್ನೇಯಕ್ಕೆ ಸುಮಾರು 225 ಕಿ.ಮೀ. ದೂರದಲ್ಲಿ ಏಡನ್ ಕೊಲ್ಲಿಯಲ್ಲಿ ದಾಳಿ ನಡೆದಿದ್ದು ಈ ಹಿಂದೆಯೂ ಈ ಪ್ರದೇಶದಲ್ಲಿ ಹಡಗುಗಳ ಮೇಲೆ ಹೌದಿಗಳು ಹಲವು ದಾಳಿ ನಡೆಸಿದ್ದಾರೆ. ಕ್ಷಿಪಣಿ ಹಡಗಿಗೆ ಬಡಿದಿದೆ, ಆದರೆ ಯಾವುದೇ ಹಾನಿಯಾಗಿಲ್ಲ ಎಂದು ಹಡಗಿನ ಭದ್ರತಾ ಅಧಿಕಾರಿ ಹೇಳಿದ್ದಾರೆ. ಲಿಬೇರಿಯಾ ದೇಶದ ಧ್ವಜ ಹೊಂದಿರುವ `ಗ್ರಾಟನ್' ಎಂಬ ಹಡಗಿನ ಮೇಲೆ ದಾಳಿ ನಡೆದಿರುವುದಾಗಿ ಖಾಸಗಿ ಭದ್ರತಾ ಸಂಸ್ಥೆ `ಆಂಬ್ರೆ' ವರದಿ ಮಾಡಿದೆ.
Next Story