ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಹಿಂಪಡೆಯುವುದಾಗಿ ಮಸ್ಕ್ ಬೆದರಿಕೆ

ವಾಷಿಂಗ್ಟನ್: ಟ್ರಂಪ್ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಮಾತಿನ ಸಮರ ಮುಂದುವರಿದಿರುವಂತೆಯೇ ವಿಶ್ವದ ಅತೀ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಗಗನಯಾತ್ರಿಗಳನ್ನು ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕರೆದೊಯ್ಯಲು ಮತ್ತು ಸರಬರಾಜುಗಳನ್ನು ಕೊಂಡೊಯ್ಯಲು ಬಳಸುವ ಗಗನನೌಕೆಯನ್ನು ಹಿಂದಕ್ಕೆ ಪಡೆಯುವುದಾಗಿ ಬೆದರಿಸಿದ್ದಾರೆ.
ಮಸ್ಕ್ ಅವರ ಸ್ಪೇಸ್‍ಎಕ್ಸ್ ರಾಕೆಟ್ ಸಂಸ್ಥೆ ಹಾಗೂ ಸ್ಟಾರ್‍ಲಿಂಕ್ ಇಂಟರ್‍ನೆಟ್ ಉಪಗ್ರಹ ಸೇವೆಗೆ ನೀಡಲಾಗಿದ್ದ ಸರ್ಕಾರಿ ಗುತ್ತಿಗೆಗಳನ್ನು ಕಡಿತಗೊಳಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ ಬಳಿಕ ಪ್ರತಿಕ್ರಿಯಿಸಿರುವ ಮಸ್ಕ್ `ನಮ್ಮ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ತಕ್ಷಣ ಪ್ರಾರಂಭಿಸುತ್ತೇವೆ' ಎಂದು ಹೇಳಿದ್ದಾರೆ.
Next Story





