ಪಾಕಿಸ್ತಾನ: ಸೇನಾ ಹೆಲಿಕಾಪ್ಟರ್ ಪತನ; ಐವರು ಮೃತ್ಯು

PC : PTI
ಕರಾಚಿ, ಸೆ.1: ಪಾಕಿಸ್ತಾನದ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರಾಂತದ ಡೈಮರ್ ಜಿಲ್ಲೆಯ ಚಿಲಾಸ್ ಬಳಿ ಸೋಮವಾರ ಸರಕಾರಿ ಹೆಲಿಕಾಪ್ಟರ್ ಪತನಗೊಂಡಿದ್ದು ಹೆಲಿಕಾಪ್ಟರ್ ನಲ್ಲಿದ್ದ ಎಲ್ಲಾ ಐದು ಮಂದಿಯೂ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಹೊಸದಾಗಿ ನಿರ್ಮಾಣಗೊಂಡಿದ್ದ ಹೆಲಿಪ್ಯಾಡ್ನಲ್ಲಿ `ಟೆಸ್ಟ್ ಲ್ಯಾಂಡಿಂಗ್' ನಡೆಸುತ್ತಿದ್ದಾಗ ದುರಂತ ಸಂಭವಿಸಿದ್ದು ಇಬ್ಬರು ಪೈಲಟ್ ಗಳು ಹಾಗೂ ಮೂವರು ತಂತ್ರಜ್ಞರು ಮೃತಪಟ್ಟಿದ್ದಾರೆ. ಪಾಕಿಸ್ತಾನ ಸೇನೆಯ ಹೆಲಿಕಾಪ್ಟರ್ ಅನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗೆ ಗಿಲ್ಗಿಟ್ ಬಾಲ್ಟಿಸ್ತಾನ್ ಸರಕಾರ ಬಳಸುತ್ತಿತ್ತು ಎಂದು ಸರ್ಕಾರದ ವಕ್ತಾರರನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
Next Story





