ನೇಟೊ-ರಶ್ಯ ಘರ್ಷಣೆಯ ಸಾಧ್ಯತೆ : ಟರ್ಕಿ ಅಧ್ಯಕ್ಷರ ಕಳವಳ
ರಿಸೆಪ್ ತಯ್ಯಿಪ್ ಎರ್ಡೋಗನ್ | NDTV
ಇಸ್ತಾನ್ಬುಲ್: ರಶ್ಯ ಮತ್ತು ನೇಟೊದ ನಡುವೆ ನೇರ ಮುಖಾಮುಖಿಯ ಸಾಧ್ಯತೆ ಅತ್ಯಂತ ಕಳವಳಕಾರಿ ವಿಷಯವಾಗಿದ್ದು ಸಂಭಾವ್ಯ ಮುಖಾಮುಖಿಯನ್ನು ತಪ್ಪಿಸಲು ಗರಿಷ್ಠ ಸಂಯಮದ ಅಗತ್ಯವಿದೆ ಎಂದು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೋಗನ್ ಗುರುವಾರ ಹೇಳಿದ್ದಾರೆ.
ನೇಟೊ-ರಶ್ಯ ನಡುವಿನ ನೇರ ಮುಖಾಮುಖಿಯ ಸಂಭಾವ್ಯತೆ ಅತ್ಯಂತ ಕಳವಳಕಾರಿ ಎಂಬುದರಲ್ಲಿ ಸಂಶಯವಿಲ್ಲ. ಮುಖಾಮುಖಿಗೆ ಕಾರಣವಾಗಲಿರುವ ಯಾವುದೇ ಕ್ರಮವನ್ನೂ ಎಚ್ಚರಿಕೆಯಿಂದ ಮತ್ತು ಪ್ರಜ್ಞಾಪೂರ್ವಕವಾಗಿ ತಪ್ಪಿಸಬೇಕು ಎಂದವರು ಆಗ್ರಹಿಸಿದ್ದಾರೆ.
ಉಕ್ರೇನ್ಗೆ ಎಫ್-16 ಜೆಟ್ ವಿಮಾನಗಳ ಪೂರೈಕೆ ಆರಂಭವಾಗಿದೆ ಎಂದು ನೇಟೊ ಒಕ್ಕೂಟದ ಘೋಷಣೆಗೆ ಪ್ರತಿಕ್ರಿಯಿಸಿದ್ದ ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ `ನೇಟೊದಿಂದ ಎದುರಾಗಿರುವ ಅತ್ಯಂತ ಗಂಭೀರ ಬೆದರಿಕೆಯನ್ನು ನಿಗ್ರಹಿಸಲು ಸೂಕ್ತ ಪ್ರತಿಕ್ರಮಗಳನ್ನು ರಶ್ಯ ರೂಪಿಸುತ್ತಿದೆ ಎಂದಿದ್ದಾರೆ.
Next Story