ಇರಾನ್ ನಿಂದ ಉಪಗ್ರಹ ಉಡಾವಣೆ ಯಶಸ್ವಿ

PC : NDTV
ಟೆಹ್ರಾನ್ : ಇರಾನ್ ದೇಶೀಯವಾಗಿ ಅಭಿವೃದ್ಧಿಪಡಿಸಿದ ಉಪಗ್ರಹ ವಾಹಕವನ್ನು ಬಳಸಿಕೊಂಡು ಉಪಗ್ರಹ ಮತ್ತು ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿರುವ ಬಾಹ್ಯಾಕಾಶ ಉಡಾವಣೆಯನ್ನು ಶುಕ್ರವಾರ ಯಶಸ್ವಿಯಾಗಿ ನಡೆಸಿದೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ವರದಿ ಮಾಡಿದೆ.
ಫಖ್ರ್-1 ದೂರಸಂಪರ್ಕ ಉಪಗ್ರಹ ಮತ್ತು ಸಮನ್-1 ಬಾಹ್ಯಾಕಾಶ ನೌಕೆ ಸಹಿತ 300 ಕಿ.ಗ್ರಾಂ. ತೂಕದ ಪೇಲೋಡ್(ನಿರ್ದಿಷ್ಟ ಉದ್ದೇಶಕ್ಕಾಗಿ ಉಪಗ್ರಹದಲ್ಲಿ ಸಾಗಿಸಲ್ಪಡುವ ವೈಜ್ಞಾನಿಕ ಅಥವಾ ತಾಂತ್ರಿಕ ಉಪಕರಣ) ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಲಾಗಿದೆ. ಸಮನ್-1 ಪ್ರಸರಣ ವ್ಯವಸ್ಥೆಯಾಗಿದ್ದು ಉಪಗ್ರಹಗಳನ್ನು ಕೆಳ ಕಕ್ಷೆಯಿಂದ ಎತ್ತರಕ್ಕೆ ಸಾಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಇರಾನ್ ನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಹೇಳಿದೆ.
Next Story





