ಗಾಝಾ: ಬಾಂಬ್ ಸ್ಫೋಟಕ್ಕೆ ಏಳು ಇಸ್ರೇಲಿ ಸೈನಿಕರು ಮೃತ್ಯು

PC | X@AppleSeedTX
ಜೆರುಸಲೇಂ: ದಕ್ಷಿಣ ಗಾಝಾದ ನಗರವಾದ ಖಾನ್ ಯೂನಿಸ್ ನಲ್ಲಿ ಇಸ್ರೇಲ್ ಸೇನಾವಾಹನದ ಮೇಲೆ ಮಂಗಳವಾರ ನಡೆದ ಬಾಂಬ್ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆಂದು ಇಸ್ರೇಲಿ ಸೇನಾಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಮೃತಪಟ್ಟ ಯೋಧರಲ್ಲಿ ಆರು ಮಂದಿಯ ಹೆಸರನ್ನು ಬಹಿರಂಗಪಡಿಸಲಾಗಿದ್ದು ಇನ್ನೋರ್ವ ಯೋಧನ ಹೆಸರನ್ನು ಇನ್ನೂ ಕೂಡಾ ಗೋಪ್ಯವಾಗಿ ಇರಿಸಲಾಗಿದೆ ಎಂದು ಇಸ್ರೇಲ್ ಸೇನೆಯ ತಿಳಿಸಿದೆ.
ಖಾನ್ ಯೂನಿಸ್ ಪ್ರದೇಶದಲ್ಲಿ ಮಂಗಳವಾರ ನಡೆದ ಪ್ರತ್ಯೇಕ ಪ್ರಕರಣವೊಂದರಲ್ಲಿ, ಓರ್ವ ಯೋಧ ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆಂದು ಸೇನೆಯು ತಿಳಿಸಿದೆ.
ಹಮಾಸ್ನ ಮಿಲಿಟರಿ ದಳವಾದ ಅಲ್ ಖಾಸ್ಸಮ್ ಬ್ರಿಗೇಡ್ ಟೆಲಿಗ್ರಾಮ್ ಚಾನಲ್ ನಲ್ಲಿ ಪ್ರಕಟಿಸಿದ ಪೋಸ್ಟ್ ಒಂದರಲ್ಲಿ, ದಕ್ಷಿಣ ಗಾಝಾಪಟ್ಟಿಯಲ್ಲಿರುವ ವಸತಿಕಟ್ಟಡವೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದ ಇಸ್ರೇಲಿ ಸೈನಿಕರನ್ನು ಗುರಿಯರಿಸಿ ದಾಳಿ ನಡೆಸಿರುವುದಾಗಿ ತಿಳಿಸಿದೆ.
Next Story





