ಮಲೇಶ್ಯಾದ ನೂತನ ದೊರೆ ಸುಲ್ತಾನ್ ಇಬ್ರಾಹಿಂ ಪಟ್ಟಾಭಿಷೇಕ
PC: indianexpress
ಕೌಲಲಾಂಪುರ : ಮಲೇಶ್ಯಾದ ನೂತನ ದೊರೆಯಾಗಿ ಸುಲ್ತಾನ್ ಇಬ್ರಾಹಿಂ ಇಸ್ಕಾಂದರ್ ಅವರ ಪಟ್ಟಾಭಿಷೇಕ ಸಮಾರಂಭ ಶನಿವಾರ ಸಾಂಪ್ರದಾಯಿಕ ಗೌರವದೊಂದಿಗೆ ಅದ್ದೂರಿಯಾಗಿ ನಡೆಯಿತು.
65 ವರ್ಷದ ಸುಲ್ತಾನ್ ಇಬ್ರಾಹಿಂ ಇಸ್ಕಾಂದರ್ ಜನವರಿ 31ರಂದು ದೊರೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಶನಿವಾರ ರಾಷ್ಟ್ರೀಯ ಅರಮನೆಯಲ್ಲಿ ಮಲಯ ಸಂಸ್ಕೃತಿ ಮತ್ತು ವೈಭವದಿಂದ ಕೂಡಿದ್ದ ಪಟ್ಟಾಭಿಷೇಕ ಸಮಾರಂಭವು ಸುಲ್ತಾನ್ ಇಬ್ರಾಹಿಂ ಇಸ್ಕಾಂದರ್ ಅವರನ್ನು ಮಲೇಶ್ಯಾದ 17ನೇ ದೊರೆಯೆಂದು ಅಧಿಕೃತಗೊಳಿಸಿದೆ. ಸಮಾರಂಭದ ಆರಂಭದಲ್ಲಿ ದೊರೆಗೆ ಕುರ್ ಆನ್ ಪ್ರತಿಯನ್ನು ಅರ್ಪಿಸಲಾಯಿತು. ಬಳಿಕ ಅಧಿಕಾರದ ಸಂಕೇತವಾದ ಚಿನ್ನದ ಕಠಾರಿಯನ್ನು ದೊರೆ ಸ್ವೀಕರಿಸಿದರು.
Next Story