ಒತ್ತೆಯಾಳುಗಳ ಮೃತದೇಹ ಪತ್ತೆಹಚ್ಚಲು ತಜ್ಞರ ತಂಡ ರವಾನೆ: ತುರ್ಕಿಯಾ

ಸಾಂದರ್ಭಿಕ ಚಿತ್ರ | Photo Credi : NDTV
ಅಂಕಾರ, ಅ.17: ನಾಪತ್ತೆಯಾಗಿರುವ 19 ಇಸ್ರೇಲಿ ಒತ್ತೆಯಾಳುಗಳ ಮೃತದೇಹವನ್ನು ಪತ್ತೆಹಚ್ಚಲು ತನ್ನ `ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರ'ದ ತಜ್ಞರ ತಂಡವನ್ನು ರವಾನಿಸುವುದಾಗಿ ತುರ್ಕಿಯಾ ಹೇಳಿದೆ.
2023ರಲ್ಲಿ ತುರ್ಕಿಯಾದಲ್ಲಿ ಸಂಭವಿಸಿದ್ದ ವಿನಾಶಕಾರಿ ಭೂಕಂಪದ ಸಂದರ್ಭ ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಕಾರ್ಯನಿರ್ವಹಿಸಿ, ಕಲ್ಲುಮಣ್ಣಿನ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಿದ ಅನುಭವಿ ತಜ್ಞರ ತಂಡವನ್ನು ಗಾಝಾ ಪಟ್ಟಿಗೆ ರವಾನಿಸಲು ನಿರ್ಧರಿಸಲಾಗಿದ್ದು ಇಸ್ರೇಲ್ನ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.
ಮಾನವೀಯ ನೆರವನ್ನು ಪೂರೈಸುವುದು, ಮೃತದೇಹಗಳನ್ನು ಪತ್ತೆಹಚ್ಚುವುದು ಮತ್ತು ಕದನ ವಿರಾಮಕ್ಕೆ ನೆರವಾಗುವುದು ಈ ತಂಡದ ಪ್ರಮುಖ ಕಾರ್ಯವಾಗಿರುತ್ತದೆ ಎಂದು ತುರ್ಕಿಯಾ ದರಕ್ಷಣಾ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.
Next Story





