ತುರ್ಕಿಯ | ಅಗ್ನಿ ದುರಂತದಲ್ಲಿ ಮಹಿಳೆ, ಮೂವರು ಮಕ್ಕಳ ಮೃತ್ಯು

ಅಂಕಾರ: ತರ್ಕಿಯ ಆಗ್ನೇಯ ಪ್ರಾಂತದ ದಿಯಾರ್‍ಬಕಿರ್ ನಗರದಲ್ಲಿ ಬಹುಮಹಡಿ ಅಪಾರ್ಟ್‍ಮೆಂಟ್ ಬ್ಲಾಕ್ ನಲ್ಲಿ ಗುರುವಾರ ಸಂಭವಿಸಿದ ಅಗ್ನಿದುರಂತದಲ್ಲಿ ಮಹಿಳೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಗುರುವಾರ ಸಂಜೆ ಅಪಾರ್ಟ್‍ಮೆಂಟ್ ನ ಬ್ಲಾಕ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ 30ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಿದೆ. ತೀವ್ರ ಅಸ್ವಸ್ಥಗೊಂಡಿದ್ದ ಮಹಿಳೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮೃತಪಟ್ಟವರು ಆ ಮಹಿಳೆಯ ಮಕ್ಕಳೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ.
Next Story





