ರೈತ ನಾಯಕರಾದ ಕಾ.ಸತ್ಯವಾನ್, ಸದಾಶಿವ್ ದಾಸ್ ಮತ್ತಿತರರ ಬಂಧನ; ಬಿಡುಗಡೆಗೊಳಿಸುವಂತೆ ಆಗ್ರಹ

ಕಲಬುರಗಿ: ಒಡಿಶಾದ ಕಿಯೋಂಝಾರ್ ಜಿಲ್ಲೆಯ ಜಮುನಾಪೋಸಿ ಗ್ರಾಮದಲ್ಲಿ ಜಿಂದಾಲ್ ಪೋಸ್ಕೊ ವಿರೋಧಿ ಮಂಚ್ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಸಂಯುಕ್ತ ಕಿಸಾನ್ ಮೋರ್ಚಾ (SKM) ರಾಷ್ಟ್ರೀಯ ನಾಯಕ ಕಾ. ಸತ್ಯವಾನ್, AIKKMS ನ ಒಡಿಶಾ ರಾಜ್ಯ ಅಧ್ಯಕ್ಷ ಸದಾಶಿವ್ ದಾಸ್ ಸೇರಿದಂತೆ ಇತರರನ್ನು ಬಂಧಿಸಿರುವುದನ್ನು AIKKMS ಕಾರ್ಯದರ್ಶಿ ಮಹೇಶ್ ಎಸ್. ಬಿ. ಅವರು ಖಂಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಹೇಶ್ ಎಸ್. ಬಿ, ತುರುಮುಂಗಾ ಪೊಲೀಸ್ ಠಾಣೆಯಲ್ಲಿ ಬಂಧಿಸಿರುವ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಹೋರಾಟಗಾರರನ್ನು ಬಂಧಿಸಿರುವುದು ರೈತ ವಿರೋಧಿ ನೀತಿಯಾಗಿದೆ. ಬಂಧಿಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ. ತಕ್ಷಣವೇ ಬಂಧಿತ ನಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
Next Story





