ಕಾಳಗಿ | ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿ ಅಣವೀರಪ್ಪ ಆಯ್ಕೆ

ಕಲಬುರಗಿ : ಕಾಳಗಿ ತಾಲೂಕು ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷರಾಗಿ ಅಣವೀರಪ್ಪ ನಾಗೂರ ಅವರನ್ನು ರವಿವಾರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾಳಗಿ ಪಟ್ಟಣದ ನೀಲಕಂಠ ಕಾಳೇಶ್ವರ ದೇವಸ್ಥಾನ ಆವರಣದಲ್ಲಿ ರವಿವಾರ ನಡೆದ ನಿವೃತ್ತ ನೌಕರರ ಸಂಘದ ಸಭೆಯಲ್ಲಿ ನಿವೃತ್ತ ನೌಕರರರೆಲ್ಲರು ಸೇರಿ ಸರ್ವಾನುಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಜಿ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣಗೌಡ ಪೊಲೀಸ್ ಪಾಟೀಲ ತಿಳಿಸಿದರು.
ನಂತರ ಮಾತನಾಡಿದ ಅವರು, ನಿವೃತ್ತ ಶಿಕ್ಷಕ ಅಣವೀರಪ್ಪ ನಾಗೂರ ಅವರು ವೃತ್ತಿ ಬದುಕು ಹಾಗೂ ನಿವೃತ್ತಿ ಜೀವನದಲ್ಲಿ ಸಲ್ಲಿಸಿರುವ ಸಮಾಜಮುಖಿ ಕಾರ್ಯಗಳನ್ನು ಅರಿತು ನಿವೃತ್ತಿ ನೌಕರರ ಶ್ರೇಯಾಭಿವೃದ್ಧಿಯಾಗಿ ಅಣವೀರಪ್ಪ ನಾಗೂರ ಅವರನ್ನು ಎಲ್ಲರ ಒಮ್ಮತದೊಂದಿಗೆ ನಿವೃತ್ತ ನೌಕರರ ತಾಲೂಕಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ತಾಲೂಕಾಧ್ಯಕ್ಷ ಅಣವೀರಪ್ಪ ನಾಗೂರ ಮಾತನಾಡಿ, ವೃತ್ತಿ ಬದುಕಿನಂತೆ ನಿವೃತ್ತಿ ಜೀವನದಲ್ಲೂ ಪ್ರಮಾಣಿಕವಾಗಿ ನಿವೃತ್ತ ನೌಕರರ ಸರ್ವತೋಮುಖ ಅಭಿವೃದ್ಧಿಗಾಗಿ ಅವಿರತವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು :
ಗೌರವಾಧ್ಯಕ್ಷರಾಗಿ ಮಹಮ್ಮದ್ ಗುಡುಸಾಬ ಕಮಲಾಪೂರ, ಅಧ್ಯಕ್ಷರಾಗಿ ಅಣವೀರಪ್ಪ ನಾಗೂರ, ಉಪಾಧ್ಯಕ್ಷರಾಗಿ ನಾಗರಾಜ ಹೆಬ್ಬಾಳ, ನಾಗಪ್ಪ ಬೀದಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ತಾರಚಂದ ಜಾಧವ್, ಖಜಾಂಚಿಯಾಗಿ ಅಣ್ಣರಾವ ಮಠಪತಿ, ಸಂಘಟನಾ ಕಾರ್ಯದರ್ಶಿಯಾಗಿ ಅಂಬಣ್ಣ ಹೂಗೊಂಡ, ಇಬ್ರಾಹಿಂಪಾಶಾ ಗಿರಿಣಿಕರ್, ಜಂಟಿ ಕಾರ್ಯದರ್ಶಿಯಾಗಿ ನಾಗೀಂದ್ರಪ್ಪ ಮುಚ್ಚಟ್ಟಿ, ಸಿದ್ಧಣ್ಣ ಭೀಮಳ್ಳಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶಾಮರಾವ್ ಕಡಬೂರ ಅವರನ್ನು ನೇಮಕ ಮಾಡಲಾಯಿತು.
ನಿವೃತ್ತ ನೌಕರರಾದ ಕಾಶಿನಾಥ ಭಂಟನಳ್ಳಿ, ಸೈಯದ್ ಮಕಬೂಲ್, ತಿಪ್ಪಣ್ಣ ಸಿರಿಮನಿ, ನೀಲಕಂಠ ನಾಗೂರ, ತುಕರಾಮ ಸಾಬನೆ, ಹಣಮಂತರಾವ ಹಡಪಾದ, ಖಾಜಾಸಾಬ ಕಂದಗೂಳ, ತುಳಜಾರಾಮ ಸಾಬನೆ ಸೇರಿದಂತೆ ಅನೇಕರು ಇದ್ದರು.







