ಅಕ್ರಮ ಮದ್ಯ ಮಾರಾಟ: 3 ವರ್ಷಗಳಲ್ಲಿ ಕಲಬುರಗಿಯಲ್ಲಿ 652 ಪ್ರಕರಣ ದಾಖಲು; 122 ಆರೋಪಿಗಳ ದಸ್ತಗಿರಿ

ಕಲಬುರಗಿ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಪ್ರಕರಣಗಳು ಸರಕಾರದ ಗಮನಕ್ಕೆ ಬಂದಿವೆ. ಇದನ್ನು ತಡೆಯಲು ಸ್ವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಳೆದ 3 ವರ್ಷಗಳಲ್ಲಿ 652 ಪ್ರಕರಣ ದಾಖಲಿಸಿ 122 ಮಂದಿಯನ್ನು ಅಕ್ರಮ ಮದ್ಯ ಮಾರಾಟದ ಆರೋಪಗಳ ಮೇಲೆ ದಸ್ತಗಿರಿ ಮಾಡಲಾಗಿದೆ ಎಂದು ಸದನದಲ್ಲಿ ಶಾಸಕ ಅಲ್ಲಂಪ್ರಭು ಪಾಟೀಲರ ಪ್ರಶ್ನೆಗೆ ಅಬಕಾರಿ ಖಾತೆ ಸಚಿವರಾದ ಆರ್‌ಬಿ ತಿಮ್ಮಾಪುರ ಲಿಖಿತ ಉತ್ತರ ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟದ ಹವಳಿಯಿಂದಾಗಿ ಕಾಲೇಜು ಯುವಕರು, ಗ್ರಾಮೀಣ ಜನ ಹೆಚ್ಚಿನ ಪ್ರಮಾಣದಲ್ಲಿ ಮದ್ಯದ ದಾಸರಾಗುತ್ತಿರೋದು ಗಮನಕ್ಕೆ ಬಂದಿಲ್ಲ, ಆದರೂ ಸದರಿ ಹಾವಳಿ ತಪ್ಪಿಸಲು, ನಿಯಂತ್ರಿಸಲು ಸರ್ವ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಸಚಿವ ಅಲ್ಲಮ ಪ್ರಭು ಪಾಟೀಲರ ಪ್ರಶ್ನೆಗೆ ಉತ್ತರಿಸುತ್ತ ಸ್ಪಷ್ಟಪಡಿಸಿದ್ದಾರೆ.
ಅಕ್ರಮ ಮದ್ಯ ಮಾರಾಟದ ಪ್ರಕರಣಗಳಲ್ಲಿ ಕಳೆದ 3 ವರ್ಷದಿಂದ ಬಿಗಿ ಕಮ ಕೈಗೊಳ್ಳಲಾಗುತ್ತಿದೆ. 2022-23 ರಲ್ಲಿ 330 ಪ್ರಕರಣದಲ್ಲಿ 85 ಆರೋಪಿಗಳನ್ನು ಬಂಧಿಸಲಾಗಿದೆ. 2023- 24 ರಲ್ಲಿ 280 ಪ್ರಕರಣಗಳಲ್ಲಿ 37 ಬಂಧಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 47 ಪ್ರಕರಣ ದಾಖಲಾಗಿವೆ, ಇಲ್ಲಿಯವರೆಗೂ ಯಾರನ್ನೂ ಬಂಧಿಸಲಾಗಿಲ್ಲವೆಂದು ಸಚಿವ ತಿಮ್ಮಾಪೂರ ಹೇಳಿದ್ದಾರೆ.





