ಕಲಬುರಗಿ | ನಾಪತ್ತೆಯಾಗಿದ್ದ ಯುವಕನ ಮೃತದೇಹ ಚರಂಡಿಯಲ್ಲಿ ಪತ್ತೆ

ಮುಝಾಮಿಲ್ ಸಿದ್ದೀಕ್ ಅಹ್ಮದ್(18)
ಕಲಬುರಗಿ : ಶನಿವಾರ ನಾಪತ್ತೆಯಾಗಿದ್ದ ಯುವಕನೋರ್ವ ರವಿವಾರ ಬೆಳಗ್ಗೆ ಚರಂಡಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಗರದ ಬಸವೇಶ್ವರ ಕಾಲೋನಿ ಸಮೀಪ ನಡೆದಿದೆ.
ನಗರದ ಜವಾಹರಹಿಂದ್ ಕಾಲೋನಿ ನಯಾ ಮೊಹಲ್ಲಾದ ನಿವಾಸಿ ಮುಝಾಮಿಲ್ ಸಿದ್ದೀಕ್ ಅಹ್ಮದ್(18) ಮೃತ ಯುವಕನೆಂದು ಗುರುತಿಸಲಾಗಿದೆ.
ಮೃತ ಯುವಕ ಮುಝಾಮಿಲ್, ಕಳೆದ ರಾತ್ರಿ ಮನೆಗೆ ಬಾರದೆ ನಾಪತ್ತೆಯಾಗಿದ್ದ. ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗದ ಕಾರಣ ಇಲ್ಲಿನ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು ಚರಂಡಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.
ಈ ಕುರಿತು ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





