ಕಲಬುರಗಿ| ಅಪರಿಚಿತ ವಾಹನ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

ಕಲಬುರಗಿ: ಅಪರಿಚಿತ ವಾಹನವೊಂದು ಬೈಕ್‌ಗ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಸಿರನೂರ ಪ್ರದೇಶದಲ್ಲಿ ನಡೆದಿದೆ.
ಆಳಂದ ತಾಲ್ಲೂಕಿನ ಚಲಗೇರಿ ಗ್ರಾಮದ ನಿವಾಸಿ ಅಂಬಾರಾಯ ಮಾರುತಿ ಚಲಗೇರಿ(47) ಮೃತರು. ಮಾದಿಗ ಸಮುದಾಯದ ಸ್ಥಳೀಯ ಮುಖಂಡರಾಗಿರುವ ಮಾರುತಿ ಚಲಗೇರಿ ಕಲಬುರಗಿ ನಗರದ ಹಳೆ ಆರ್.ಟಿ.ಓ ಕ್ರಾಸ್ ಸಮೀಪ ವಾಸವಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





