ಕಲಬುರಗಿ | ಬದುಕಿನ ಅರಿವು ತಂದುಕೊಳ್ಳಲು ಅಂಬೇಡ್ಕರ್ ಅವರು ಮಾದರಿ : ಕೋರಣೇಶ್ವರ ಶ್ರೀ

ಕಲಬುರಗಿ : ಮಾನವೀಯತೆ, ನೈತಿಕ ಮೌಲ್ಯ, ವೈಚಾರಿಕತೆ ಹಾಗೂ ಸ್ವಾಭಿಮಾನದ ಬದುಕಿನ ಅರಿವು ತಂದುಕೊಳ್ಳಲು ನಮಗೆ ಬಿ.ಆರ್.ಅಂಬೇಡ್ಕರ್ ಅವರೇ ಮಾದರಿಯಾಗಬೇಕು ಎಂದು ತೋಂಟದಾರ್ಯ ಅನುಭವ ಮಂಟಪದ ಸಂಚಾಲಕ ಕೋರಣೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಆಳಂದ ತಾಲ್ಲೂಕಿನ ಹೆಬಳ್ಳಿ ಗ್ರಾಮದಲ್ಲಿ ಶುಕ್ರವಾರ ಸಿದ್ಧಾರ್ಥ ತರುಣ ಸಂಘದಿಂದ ಏರ್ಪಡಿಸಿದ ಬಿ.ಆರ್.ಅಂಬೇಡ್ಕರ್ ಅವರ 134ನೇ ಜಯಂತಿ ಉತ್ಸವದಲ್ಲಿ ಮಾತನಾಡಿದರು.
ಜಾತಿ, ಧರ್ಮ, ಸಂಘಟನೆಗಳ ಶಕ್ತಿ ಪದರ್ಶನಕ್ಕೆ ಮಹಾತ್ಮರ ಜಯಂತಿ ಆಚರಣೆ ಮಾಡುವುದು ಬೇಕಾಗಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್, ಫುಲೆ ದಂಪತಿಗಳ ಚಿಂತನೆಗಳು ಸ್ಮರಣೆಯಿಂದ ನಮ್ಮ ಜೀವನ ಕಲ್ಯಾಣ ಆಗುತ್ತದೆ. ನಮ್ಮ ಸಮಾಜದಲ್ಲಿ ಸಮಾನತೆ, ಸಹಿಷ್ಣುತೆ ಹಾಗೂ ಸಹೋದರತ್ವ ಗುಣಗಳು ಬೆಳಯುತ್ತವೆ ಎಂದರು.
ಬೆಳಮಗಿ ಅಮರಜ್ಯೋತಿ ಬಂತೇಜಿ, ಪ್ರಾಂಶುಪಾಲ ಸಂಜಯ್ ಎಸ್.ಪಾಟೀಲ ಮಾತನಾಡಿದರು.
ಹೋರಾಟಗಾರ ಬಸವಲಿಂಗಪ್ಪ ಗಾಯಕವಾಡ, ನಿವೃತ್ತ ಮುಖ್ಯ ಶಿಕ್ಷಕ ಪಂಡಿತ ಹೊಸಮನಿ ಮಾತನಾಡಿದರು. ವಕೀಲ ನಾಗೇಂದ್ರ ಕೆ ಜವಳಿ ಅಧ್ಯಕ್ಷತೆವಹಿಸಿದರು. ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಶೇರಿಕಾರ, ಅಂಬಾದಾಸ ಕುಲಕರ್ಣಿ, ಮುಖಂಡ ಆನಂದರಾವ ಗಾಯಕವಾಡ, ವಿಠಲ ಹೊಸಮನಿ, ಮರಪ್ಪ ಜಿಂಗೆ, ದಿಲೀಪ ಕಾಂಬಳ,ಪ್ರದೀಪ ಜಿಂಗೆ, ವಿಲಾಸ ದೇಡೆ, ಮಾರುತಿ ಹೊಸಮನಿ, ಖಾಜಪ್ಪ ಜಿಂಗೆ, ಚಾಂದಸಾಬ ಶೇಖ, ಶಾಣಪ್ಪ ಗಾಯಕವಾಡ, ಆದಿನಾಥ, ರಾಜು ಶೇರಿಕಾರ, ಸಿದ್ದರಾಮ ಜಿಂಗೆ, ಉದಯಕುಮಾರ, ರಾಹುಲ, ಪ್ರಕಾಶ ಗಾಯಕವಾಡ, ಶ್ರೀಕಾಂತ ಕಾಂಬಳೆ ಉಪಸ್ಥಿತರಿದ್ದರು. ಸೈಬಣ್ಣ ಜಮದಾರ ನಿರೂಪಿಸಿದರೆ, ಪ್ರದೀಪ ಸಿ. ಜಿಂಗೆ ಸ್ವಾಗತಿಸಿದರು. ಅನೀಲ ಕಾಂಬಳೆ ವಂದಿಸಿದರು.
ಈ ಮೊದಲು ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮುಖಂಡ ಮಲ್ಲಣ್ಣ ನಾಗೂರೆ ಪೂಜೆ ಸಲ್ಲಿಸಿದರು. ಲಾಯಕಲಿ ಪಟೇಲ್, ಭೀಮಾಶಂಕರ ನಾಗೂರೆ, ಚಂದ್ರಕಾಂತ ಬೆಳಂ, ಕಾಶಿನಾಥ ಒಡೆಯರ್ ಪಾಲ್ಗೋಂಡಿದರು. ಇದೇ ಸಂದರ್ಭದಲ್ಲಿ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಂತರ ಗ್ರಾಮದ ಮುಖ್ಯಬೀದಿಗಳಲ್ಲಿ ಅಂಬೇಡ್ಕರ್ ಪ್ರತಿಮೆಯ ಭವ್ಯ ಮೆರವಣಿಗೆ ನಡೆಯಿತು.







