ಕಲಬುರಗಿ | ಬುದ್ದಿಮಾಂದ್ಯ ಮಕ್ಕಳಿಗೆ ಫಿಜಿಯೋಥೆರಪಿಗೆ ಅರ್ಜಿ ಆಹ್ವಾನ

ಕಲಬುರಗಿ : ಕಲಬುರಗಿ ಮಹಾನಗರಪಾಲಿಕೆಯಿಂದ ಎಸ್.ಎಫ್.ಸಿ. ಕ್ರೀಯಾ ಯೋಜನೆಗಳ ಯೋಜನೆಯಡಿ ವಿಕಲಚೇತನರಿಗೆ ಕೆಳಕಂಡ ಕಲ್ಯಾಣ ಕಾರ್ಯಕ್ರಮಗಳಡಿ ಶೇ.5ರ ಶಾಖೆಯ ಯೋಜನೆಯಾದ 2019-20ನೇ ಸಾಲಿನ ಬುದ್ದಿಮಾಂದ್ಯ ಮಕ್ಕಳಿಗೆ ಫಿಜಿಯೋಥೆರಪಿಗೆ ಒಳಪಡಿಸಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು (ಆಡಳಿತ) ಅವರು ತಿಳಿಸಿದ್ದಾರೆ.
ಅಭ್ಯರ್ಥಿಗಳು ವಿಕಲಚೇತನರರಾಗಿರಬೇಕು. ಕಲಬುರಗಿ ನಗರದ ನಿವಾಸಿಯಾಗಿರಬೇಕು. ವಾರ್ಷಿಕ ಆದಾಯ 2.50 ಲಕ್ಷ ರೂ. ಮೀರಿರಬಾರದು. .ವಿಕಲಚೇತನರ ಪ್ರಮಾಣ ಪತ್ರ ಯುಡಿಐಡಿ ಕಾರ್ಡ್ ಲಗತ್ತಿಸಬೇಕು. ನಿಗದಿತ ಅರ್ಜಿ ನಮೂನೆಯನ್ನು 2025ರ ಎ.21 ರಿಂದ ಮೇ 6 ರ ಸಂಜೆ 5.30 ಗಂಟೆಯವರೆಗೆ ಮಹಾನಗರ ಪಾಲಿಕೆಯ ಶೇ. 5ರ ಶಾಖೆಯಿಂದ ಕಚೇರಿ ವೇಳೆಯಲ್ಲಿ ಪಡೆಯಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅಗತ್ಯ ದಾಖಲೆಗಳನ್ನು ದೃಢೀಕರಿಸಿ 2025ರ ಮೇ 7 ರಿಂದ ಮೇ 10 ರ ಸಂಜೆ 4.30 ಗಂಟೆಯವರೆಗೆ ಸ್ವೀಕರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರಪಾಲಿಕೆಯ ಶೇ 5ರ ಶಾಖೆಯನ್ನು ಹಾಗೂ ಮಹಾನಗರ ಪಾಲಿಕೆಯ http://www.kalaburagicity.mrc.gov ವೆಬ್‍ಸೈಟ್‍ನ್ನು ಸಂಪರ್ಕಿಸಲು ಕೋರಲಾಗಿದೆ.





