ಕಲಬುರಗಿ | ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಈ ಕೆಳಕಂಡ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಹ ವಿಕಲಚೇತನ ಫಲಾನುಭವಿಗಳಿಂದ ಸೇವಾ ಸಿಂಧು ಪೋರ್ಟಲ್ ನಲ್ಲಿ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಫಲಾನುಭವಿ ಆಧಾರಿತ ಯೋಜನೆಗಳನ್ನು ಸೇವಾ ಸಿಂಧು ತಂತ್ರಾಂಶ ಇವರು ಡಿ.ಬಿ.ಟಿ. (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಿದ್ದು, ವಿವಿಧ ಫಲಾನುಭವಿ ಆಧಾರಿತ ಯೋಜನೆಗಳಾದ ಆಧಾರ ಯೋಜನೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಯೋಜನೆ, ನಿರುದೋಗ ಭತ್ಯೆ, ಶಿಶು ಪಾಲನಾ ಭತ್ಯೆ, ಮರಣ ಪರಿಹಾರ ನಿಧಿ, ಪ್ರತಿಭೆ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‍ಟಾಪ್ ಯೋಜನೆ, ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್‍ಕಿಟ್ ಯೋಜನೆ, ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ, ಸಾಧನ ಸಲಕರಣೆಗಳ ಯೋಜನೆ ಹಾಗೂ ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್‍ಚೇರ್ ದ್ವಿಚಕ್ರ ವಾಹನ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಹ ವಿಕಲಚೇತನ ಫಲಾನುಭವಿಗಳು ಆನ್‍ಲೈನ್ ಮೂಲಕ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮತ್ತು ಸೇವಾಸಿಂಧು ವೆಬ್‍ಸೈಟ್ https://sevasindhu.karnataka.gov.in/Sevasindhu/DepartmentServicesKannada) ದಲ್ಲಿ ಆನ್‍ಲೈನ್ ಮೂಲಕ 2025ರ ಸೆ.30 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ಮೊಬೈಲ್ ಸಂಖ್ಯೆ: 08472-235222 ಕಲಬುರಗಿ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ತಾಲೂಕು ಪಂಚಾಯಿತಿ ಕಚೇರಿ ಮೊಬೈಲ್ ಸಂಖ್ಯೆ-9972079714, ಅಫಜಲಪೂರ (ಯು.ಆರ್.ಡಬ್ಲ್ಯೂ)-8880023232, ಆಳಂದ-9483054495, ಜೇವರ್ಗಿ-9741875881, ಚಿತ್ತಾಪೂರ-9845204328, ಚಿಂಚೋಳಿ-9880671171, ಸೇಡಂ-9902417925, ಕಾಳಗಿ-9964859658, ಶಹಾಬಾದ-6360771314 ಹಾಗೂ ಯಡ್ರಾಮಿ-9900866151 ಗಳಿಗೆ ಸಂಪರ್ಕಿಸಬೇಕು. ಈ ಹಿಂದೆ 2024-25ನೇ ಸಾಲಿನಲ್ಲಿ ಮೇಲಿನ ಯೋಜನೆಯಡಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯದೆ ಇರುವ ಅರ್ಜಿದಾರರು ಮತ್ತೊಮ್ಮೆ ಕಡ್ಡಾಯವಾಗಿ ಸೇವಾಸಿಂಧು ಪೊರ್ಟಲ್‍ನಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.







