ಕಲಬುರಗಿ| ಕಲ್ಯಾಣ ಕರ್ನಾಟಕ ಸರಕಾರಿ ನೌಕರರ ಸಂಘದ ಆಳಂದ ಘಟಕಕ್ಕೆ ಪದಾಧಿಕಾರಿಗಳ ನೇಮಕ

ಕಲಬುರಗಿ: ಕಲ್ಯಾಣ ಕರ್ನಾಟಕ ಸರಕಾರಿ ನೌಕರರ ಸಂಘದ ಆಳಂದ ಘಟಕಕ್ಕೆ ಪದಾಧಿಕಾರಿಗಳ ನೇಮಕ ಮಾಡಿ ಸಂಘದ ಜಿಲ್ಲಾ ಅಧ್ಯಕ್ಷರಾದ ಮಹೇಶ ಕುಮಾರ್ ಹೆಬ್ಬಾಳೆ ಆದೇಶ ಹೊರಡಿಸಿದ್ದಾರೆ.
ತಾಲೂಕು ಘಟಕದ ಅಧ್ಯಕ್ಷರಾಗಿ ವಿಜಯಕುಮಾರ್ ಜಿಡಗೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಾಥ್ ನಾಗುರ್, ಉಪಾಧ್ಯಕ್ಷರಾಗಿ ಸುಭಾಷ್ ಪಾಟೀಲ್, ರಾಜೇಶ್ ಶಾಖಾ, ಯಾಸ್ಮಿನ್ ತಬಸ್ಸುಮ್ ಅವರನ್ನು ನೇಮಕಮಾಡಲಾಯಿತು.
ಸಂಘಟನಾ ಕಾರ್ಯದರ್ಶಿಯಾಗಿ ಜಗನ್ನಾಥ್ ಕುಂಬಾರ್, ಧರ್ಮರಾಜ್ ದಂಗಾಪುರ್, ಕಾನೂನು ಸಲಹೆಗಾರರಾಗಿ ಬಸಣ್ಣ ಸಿಗರಕಂಟಿ, ಖಜಾಂಚಿಯಾಗಿ ರಮೇಶ್ ಕುಲಕರ್ಣಿ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀನಿವಾಸ್ ಗುತ್ತೇದಾರ್, ಭೀಮಣ್ಣ ಹಂದ್ರಳ್ ಇದ್ದರು.
Next Story





