ಕಲಬುರಗಿ | ರಾಜ್ಯ ರೈತ ಸಂಘ, ಹಸಿರು ಸೇನೆಯ ಶಹಬಾದ್ ಘಟಕದ ಪದಾಧಿಕಾರಿಗಳ ನೇಮಕ

ಕಲಬುರಗಿ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವಾಸುದೇವ ಮೇಟಿ ಬಣದ ವತಿಯಿಂದ ಜಿಲ್ಲಾ ಅಧ್ಯಕ್ಷ ಪ್ರಶಾಂತಗೌಡ ಆರ್ .ಮಾಲಿಪಾಟೀಲ್ ಹಾಗೂ ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಹಿರೇಮಠ ಅವರ ನೇತೃತ್ವದಲ್ಲಿ ಶಹಬಾದ್ ತಾಲೂಕಿನ ನೂತನ ಮಹಿಳಾ ಘಟಕದ ತಾಲೂಕು ಅಧ್ಯಕ್ಷರನ್ನಾಗಿ ಸಂಗೀತಾ ವಾಲಿ ಅವರನ್ನು ನೇಮಕ ಮಾಡಲಾಯಿತು.
ಪ್ರಶಾಂತ ಗೌಡ ಮಾಲಿಪಾಟೀಲ್ ಮಾತನಾಡಿ ಸಂಘಟನೆಯ ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಘಟಕದ ಜೊತೆಗೆ ಗ್ರಾಮ ಘಟಕಗಳ ಸ್ಥಾಪಿಸಿ ಸೇನೆ ಬಲವರ್ಧನೆಗೆ ಶ್ರಮಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಜೇವರ್ಗಿ ತಾಲೂಕಿನ ಅಧ್ಯಕ್ಷ ಪಂಚಾಯ್ಯ ಹಿರೇಮಠ ಯಡ್ರಾಮಿ, ತಾಲೂಕಿನ ಅಧ್ಯಕ್ಷ ಮಲ್ಲಿಕಾರ್ಜುನ ಯಡ್ರಾಮಿ ತಾಲೂಕು ಗೌರವ ಅಧ್ಯಕ್ಷ ವಿಜಯಕುಮಾರ್ ಬಳಬಟ್ಟಿ, ಭಾಗ್ಯ, ಬೋರಮ್ಮಾ, ಸುಜಾತಾ, ವಿದ್ಯಾಶ್ರೀ, ಭಾಗ್ಯಾಶ್ರೀ, ಸುನೀತಾ, ಶಶೀಕಲಾ, ಪವಿತ್ರಾ, ಸಂಗಿತಾ, ನಾಗಮ್ಮಾ ಸೇರಿದಂತೆ ರೈತರು, ಮಹಿಳೆಯರು ಭಾಗವಹಿಸಿದ್ದರು.
Next Story





