ಕಲಬುರಗಿ | ಜೂಜಾಟದ ಅಡ್ಡೆಗೆ ದಾಳಿ : 7 ಮಂದಿ ವಿರುದ್ಧ ಪ್ರಕರಣ ದಾಖಲು

ಕಲಬುರಗಿ: ಚಿತ್ತಾಪುರ ಪಟ್ಟಣದ ಲಾಡ್ಜಿಂಗ್ ಕ್ರಾಸ್ ಸಮೀಪದ ಕಲ್ಯಾಣ ಮಂಟಪ ಹಿಂಬದಿಯಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟದ ಅಡ್ಡೆಗೆ ದಾಳಿ ನಡೆಸಿದ ಚಿತ್ತಾಪುರ ಠಾಣೆಯ ಪೊಲೀಸರು, ಕೆಲ ರಾಜಕೀಯ ಮುಖಂಡರು ಸೇರಿದಂತೆ ಓಟ್ಟು ಏಳು ಮಂದಿಯನ್ನು ಬಂಧಿಸಿ, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಿಗ್ಗಾಂವನ ಶಿವರುದ್ರಪ್ಪ ಶಿವಲಿಂಗಪ್ಪ ಬೇಣಿ (54), ಚಿತ್ತಾಪುರದ ಸೋಮಶೇಖರ ಬಾಪುರಾವ ಪಾಟೀಲ (64), ರಾಮತೀರ್ಥದ ಜಗನಗೌಡ ಗುರುನಾಥರೆಡ್ಡಿ ಪಾಟೀಲ (58), ಭೀಮನಹಳ್ಳಿಯ ಶರಣಗೌಡ ಬಸಣ್ಣಗೌಡ (74), ಭಂಕಲಗಾದ ರವೀಂದ್ರ ರೆಡ್ಡಿ ಜಗದೇವ ರೆಡ್ಡಿ (55), ಚಿತ್ತಾಪುರದ ವೆಂಕಟೇಶ ನಗರದ ಶಿವಣ್ಣ ಶರಣಪ್ಪ ಹಿಟ್ಟಿನ (75) ಮತ್ತು ರೇಷ್ಮೆ ಗಲ್ಲಿಯ ಓಂಕಾರೇಶ್ವರ ಪ್ರಭುರಾಜ ರೇಷ್ಮೆ (57) ವಿರುದ್ಧ ಸೆಕ್ಷನ್ 87 ಕೆಪಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ.
ಜೂಜಾಟ ಆಡುತ್ತಿರುವುದರ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಜೂಜಾಟ ನಡೆಯುತ್ತಿದ್ದ ಸ್ಥಳದಲ್ಲಿ 59,220 ರೂ. ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





