ಕಲಬುರಗಿ | ಬಾಲ ಗಂಗಾಧರ ತಿಲಕ್, ಚಂದ್ರಶೇಖರ್ ಆಝಾದ್ ಅವರ ಜನ್ಮ ದಿನಾಚರಣೆ

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾವೇರಿ ವಸತಿ ನಿಲಯದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ಹಾಗೂ ಚಂದ್ರಶೇಖರ್ ಆಝಾದ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವಸತಿ ನಿಲಯದ ಮೇಲ್ವಿಚಾರಕರಾದ ನಾಗಪ್ಪ ನಗನೂರ್, ಲಕ್ಷ್ಮೀಕಾಂತ, ಅಧ್ಯಕ್ಷರಾದ ಸಂತೋಷಕುಮಾರ ಎಸ್.ಪಿ, ಉಪಾಧ್ಯಕ್ಷರಾದ ಶೈಲೇಶ್ ಸೋನಾಳೆ, ಕರ್ಣ ಯಲಬತ್ತಿ, ಭೀಮಾಶಂಕರ ಪ್ರಧಾನಿ, ಅಭಿಷೇಕ್ ಗಾಯಕವಾಡ, ಅಂಜನ್, ಪವನ್, ರಾಜು, ಹಣಮಂತ ಉಪಸ್ಥಿತರಿದ್ದರು.
Next Story





