ಕಲಬುರಗಿ | ಶಾಂತಿ ಸಭೆಯಲ್ಲಿ ಆರೆಸ್ಸೆಸ್ ಪಂಥಸಂಚಲನಕ್ಕೆ ಅನುಮತಿ ನೀಡಲು ಬಿಜೆಪಿ ಮನವಿ

ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್ 2ರಂದು ಆರೆಸ್ಸೆಸ್ ಹಮ್ಮಿಕೊಂಡಿರುವ ಪಥಸಂಚಲನಕ್ಕೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಕಚೇರಿಯಲ್ಲಿ ನಡೆಯಲಿರುವ ಶಾಂತಿ ಸಭೆಯಲ್ಲಿ ಅನುಮತಿ ನೀಡಬೇಕೆಂದು ಬಿಜೆಪಿ ಪಕ್ಷದ ಮುಖಂಡರ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿಂಚೋಳಿ ಮತಕ್ಷೇತ್ರದ ಶಾಸಕ ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ, ಮಾಜಿ ಸಂಸದ ಡಾ. ಉಮೇಶ್ ಜಾಧವ್, ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಬಿಜೆಪಿ ಪಕ್ಷದ ಗ್ರಾಂ. ಜಿಲ್ಲಾ ಅಧ್ಯಕ್ಷ ಅಶೋಕ ಬಗಲಿ, ವಿಶಾಲ್ ದರ್ಗಿ, ಶಿವಾರಾಜ್ ಪಾಟೀಲ್ ರದ್ದೇವಾಡಗಿ, ಬಸವರಾಜ್ ಬೆಣ್ಣೂರ್, ಅವಣ ಮ್ಯಾಕೇರಿ, ಅಂಬರಾಯ ಅಸ್ಟಗಿ, ಲಿಂಗರಾಜ್ ಬಿರಾದಾರ್, ಶಿವಯೋಗಿ ನಾಗನಹಳ್ಳಿ, ಸಂತೋಷ ಹಾದಿಮನಿ, ಶರಣಪ್ಪ ಇಟಗಾ, ಶರಣಪ್ಪ ತಳವಾರ್ ಸೇರಿದಂತೆ ಇತರರು ಇದ್ದರು.
ನವೆಂಬರ್ 2ರಂದು ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿ, ಪಥಸಂಚಲನ ಬಯಸುವ ಎಲ್ಲಾ ಸಂಘಟನೆಗಳಿಗೂ ಅವಕಾಶ ನೀಡುವುದಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.





