ಕಲಬುರಗಿ | ಮಾ.9ರಂದು ಐಡಿಯಲ್ ವಿಟ್ಜೀ ಅಕಾಡೆಮಿಯಿಂದ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಪ್ರಾರಂಭ : ಮುಜಾಹಿದ್ ಪಾಷಾ ಖುರೈಶಿ

ಕಲಬುರಗಿ : ಕಲ್ಯಾಣಕ ಕರ್ನಾಟಕ ಹಿಂದುಳಿದ ಭಾಗ ಎಂಬ ಹಣೆಪಟ್ಟಿ ತೆಗೆದು ಹಾಕುವ ನಿಟ್ಟಿನಲ್ಲಿ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಸಾಧಿಸಲು ಮತ್ತು ವಿದ್ಯಾರ್ಥಿಗಳನ್ನು ಶೈಕ್ಷಣಿಕ ಒತ್ತಡದಿಂದ ಹೊರಗೆ ತಂದು ಗುಣಮಟ್ಟ ಮತ್ತು ಕೌಶಲ್ಯಧಾರಿತ ಶಿಕ್ಷಣದತ್ತ ಗಮನಸೆಳೆದು ಶಿಕ್ಷಣ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಗಮನಾರ್ಹ ಸಾಧನೆಯ ಸದುದ್ದೇಶವನ್ನು ಇಟ್ಟುಕೊಂಡು ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಐಡಿಯಲ್ ಹಾಗೂ ವಿಟ್ಜೀ ಸಂಸ್ಥೆಯ ಸಯೋಗದಲ್ಲಿ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಪ್ರಾರಂಭಿಸುತ್ತಿದ್ದೇವೆ ಎಂದು ಐಡಿಯಲ್ ಸಂಸ್ಥೆಯ ಮುಖ್ಯಸ್ಥ ಹಾಗೂ ಸಂಸ್ಥಾಪಕರಾದ ಮುಜಾಹಿದ್ ಪಾಶಾ ಖುರೇಶಿ ತಿಳಿಸಿದ್ದಾರೆ.
ಶನಿವಾರ ನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ಐಐಟಿ, ಜೆಇಇ, ಕೆಸೇಟ್, ಎನ್ಇಇಟಿ ಸೇರಿದಂತೆ ಮುಂತಾದ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಮಾ.9 ರಂದು ಪ್ರಾರಂಭಗೊಳ್ಳಲಿದ್ದು, ನಗರದ ಜೇವರ್ಗಿ ರಸ್ತೆಯಲ್ಲಿನ ವಿಜಿ ಕಾಂಪ್ಲೆಕ್ಸ್ ನಲ್ಲಿ ತರಬೇತಿ ಕೇಂದ್ರ ಲೋಕಾರ್ಪಣೆಗೊಳ್ಳಲಿದೆ. ಮಾ.16ರಂದು ಮತ್ತು ಏ.3 ರಂದು ತರಬೇತಿ ಪ್ರವೇಶ ಪರೀಕ್ಷೆ ನಡೆಯಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಶೇ.100ರಷ್ಟು ಸ್ಕಾಲರ್ಶಿಫ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿಶೇಷವಾಗಿ 1993ರಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಮುಜಾಹಿದ್ ಪಾಶಾ ಖುರೇಶಿಯವರ ನೇತೃತ್ವದಲ್ಲಿ ಜೀಕ್ರಾ ಶಿಕ್ಷಣ ಸಂಸ್ಥೇ ಹಾಗೂ 2001ರಲ್ಲಿ ಐಡಿಯಲ್ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಸವನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಕಡಿಮೆ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಹೆಚ್ಚಿನ ವಿದ್ಯಾರ್ಥಿಗಳ ಯಶಸ್ವಿ ಫಲಿತಾಂಶವನ್ನು ಪಡೆಯುವಂತಾಗಿದೆ ಎಂದು ತಿಳಿಸಿದರು.
IIT/IIM ಕಲಿತವರಾಗಿರುವ ಹೈದ್ರಾಬಾದ್ ನ ವಂಶಿಕೃಷ್ಣರವರು, 20 ವರ್ಷ ಭೌತಶಾಸ್ತ್ರದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ, ಸದ್ಯ 2019 ರಿಂದ ವಿಟ್ಜೀ ಸಂಸ್ಥೆಯನ್ನು ಕಟ್ಟಿ ಹೈದಾರಾಬಾದನಲ್ಲಿ ಮೂರು ಸಂಸ್ಥೆಗಳು ಪ್ರಾರಂಭಿಸಿ ಐದು ಶಾಲೆಗಳಲ್ಲಿ ತರಬೇತಿ ನೀಡುತ್ತಿರುವ ಅನುಭವನ್ನು ಹೊಂದಿದ್ದಾರೆ. ಇದೀಗ ಕಲಬುರಗಿ ನಗರದಲ್ಲಿ ಐಡಿಯಲ್ ವಿಟ್ಜೀ ಅಕಡೆಮಿಯ ಮೂಲಕ ಶೈಕ್ಷಣಿಕ ಕ್ರಾಂತಿಗೆ ಮುಂದಾಗಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಟ್ಜೀ ಸಂಸ್ಥೆಯ ಮುಖ್ಯಸ್ಥ ವಂಶಿಕೃಷ್ಣ, ಆಡಳಿತಾಧಿಕಾರಿ ಮೊಹಮ್ಮದ್ ಜಮೀರ್, ಸಂಯೋಜಕರಾದ ಶಾಂತಲಿಂಗ್ ಮಠಪತಿ, ವ್ಯವಸ್ಥಾಪಕ ನಿರ್ದೇಶಕರಾದ ಮುಸ್ತಾಹಿದ್ ಉಮರ್, ಶ್ರೀಹರಿ, ಹರಿತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಕಲ್ಯಾಣ ಕರ್ನಾಟಕ ಶರಣರ ನಾಡು, ಕ್ರಾಂತಿ ಭೂಮಿ, ಬಸವಣ್ಣ, ಶರಣಬಸವೇಶ್ವರ, ಖಾಜಾ ಬಂದೆನವಾಜ್ ರಂತಹ ಸಮಾಜಿಕ ಸಾರ್ಮರಸ್ಯದ ಹರಿಕಾರರು ನಡೆದಾಡಿದಂತಹ ಭೂಮಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಐಡಿಯಲ್ ವಿಟ್ಜೀ ಸಂಸ್ಥೆ ಪ್ರಥಮ ಬಾರಿಗೆ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ನೊಂದಿಗೆ ಅವರಿಗೆ ಶೈಕ್ಷಣಿಕ ಸಮಸ್ಯೆ ಮತ್ತು ಒತ್ತಡದಿಂದ ದೂರವಿಟ್ಟು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಕ್ಷಣ ಕ್ರಾಂತಿಯ ಸಂಕಲ್ಪ ಹೊಂದಿದ್ದೇವೆ.
– ಮುಜಾಹಿದ್ ಪಾಶಾ ಖುರೇಶಿ, ಐಡಿಯಲ್ ಸಂಸ್ಥೆಯ ಮುಖ್ಯಸ್ಥರು, ಬಸವಕಲ್ಯಾಣ ಬೀದರ್







