ಕಲಬುರಗಿ | ಯೋಗಾಸನ ಸ್ಪರ್ಧೆಯಲ್ಲಿ ಸಿಯುಕೆ ಸಿಬ್ಬಂದಿ, ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಕಲಬುರಗಿ: ಜು.6 ರಂದು ನಗರದ ವಿರಶೈವ ಕಲ್ಯಾಣ ಮಂಟಪದಲ್ಲಿ ನಡೆದ ಕಲಬುರಗಿ ಮತ್ತು ಬೀದರ್ ಜಿಲ್ಲಾ ಯೋಗಾಸನ ಕ್ರೀಡಾ ಸ್ಪರ್ಧೆಯಲ್ಲಿ ಆಳಂದ ತಾಲ್ಲೂಕಿನ ಕಡಗಂಚಿ ಬಳಿಯಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ವಿದ್ಯಾರ್ಥಿಗಳು ಮತ್ತು ಬೋಧಕವೃಂದ ಯೋಗಾಸನದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಯೋಗಾಸನದ ವಿವಿಧ ಆಸನಗಳ ವಿಭಾಗಗಳಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಜಿಯಿಂದ ಪ್ರತಿನಿಧಿಸಲು ರಾಜ್ಯಕ್ಕೆ ಆಯ್ಕೆಯಾಗಿದ್ದಾರೆ.
ಸೀನಿಯರ್ ವಿಭಾಗ ಅ (45–55 ವರ್ಷ): ಸಾಂಪ್ರದಾಯಿಕ ಯೋಗಾಸನ – ಮಹಿಳೆ: ಡಾ. ದೇವಿಕಾ ದಾಬ್ಕೆ – ಪ್ರಥಮ ಸ್ಥಾನ (ಗಣಿತ ವಿಭಾಗ), ಸೀನಿಯರ್ ವಯೋವರ್ಗ (18–28ವರ್ಷ): ಸಾಂಪ್ರದಾಯಿಕ ಯೋಗಾಸನ – ಪುರುಷರು: ಬಬುಲಾಲ್ ಬಿಂದ್ – ಪ್ರಥಮ ಸ್ಥಾನ (ಭೌತಶಾಸ್ತ್ರ ವಿಭಾಗ) ನರೇಂದ್ರ ಪಾಟೀಲ್ – ದ್ವಿತೀಯ ಸ್ಥಾನ (ಅರ್ಥಶಾಸ್ತ್ರ ವಿಭಾಗ), ಸಾಂಪ್ರದಾಯಿಕ ಯೋಗಾಸನ – ಮಹಿಳೆಯರು: ಪ್ರತಿಮಾ – ಪ್ರಥಮ ಸ್ಥಾನ (ಭೌತಶಾಸ್ತ್ರ ವಿಭಾಗ) ಪ್ರತಿಭಾ – ತೃತೀಯ ಸ್ಥಾನ (ಭೌತಶಾಸ್ತ್ರ ವಿಭಾಗ) ಕಲಾತ್ಮಕ ಯೋಗಾಸನ (ಏಕಾಂಗ): ಭಾಗ್ಯಶ್ರೀ – ಪ್ರಥಮ ಸ್ಥಾನ (ವ್ಯವಹಾರ ಅಧ್ಯಯನ ವಿಭಾಗ) ಪಡೆದುಕೊಂಡಿದ್ದಾರೆ.
ಸಿಯುಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳ ಈ ಸಾಧನೆಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಪ್ರೊ.ಆರ್.ಆರ್.ಬೀರಾದಾರ್,, ಪ್ರೊ.ಜಿ.ಆರ್.ಅಂಗಡಿ, ಡೀನ್ ಮತ್ತು ವಿಭಾಗಾಧ್ಯಕ್ಷರು, ಶಿಕ್ಷಣ ಮತ್ತು ತರಬೇತಿ ಶಾಲೆ, ಡಾ.ಎಸ್.ಲಿಂಗಮೂರ್ತಿ, ಯೋಗ ಸಂಯೋಜಕರು, ಯೋಗ ಶಿಕ್ಷಕರಾದ ಕುಮಾರಿ ಜ್ಯೋತ್ಸ್ನಾ ಅಂಬೇವಡ್ಕರ್ ಮತ್ತು ಸಂತೋಷ್ ಬಸೇಟ್ಟಿ ಅವರು ಹರ್ಷವ್ಯಕ್ತಪಡಿಸಿ ರಾಜ್ಯ ಮಟ್ಟದ ಯೋಗಾಸನ ಕ್ರೀಡಾ ಸ್ಪರ್ಧೆಗೆ ಮುಂದಿನ ಪ್ರಯಾಣಕ್ಕೆ ಶುಭ ಕೋರಿದ್ದಾರೆ.







