ಕಲಬುರಗಿ|ವಿಕಲಚೇತನರ ಇಲಾಖೆಯ ಖಾಸಗಿ ಅನುದಾನಿತ ವಸತಿ ಶಾಲೆಗಳಿಗೆ ಜಿಲ್ಲಾ ಕಲ್ಯಾಣಾಧಿಕಾರಿ ಭೇಟಿ

ಕಲಬುರಗಿ: ವಿಕಲಚೇತನರ ಸಬಲೀಕರಣ ಇಲಾಖೆಯ ಅನುದಾನದಡಿ ಖಾಸಗಿ ಎನ್.ಜಿ.ಓ ಮೂಲಕ ನಡೆಯುತ್ತಿರುವ ವಿವಿಧ ವಿಶೇಷ ಮಕ್ಕಳ ಶಾಲೆ ಮತ್ತು ವಸತಿ ನಿಲಯಗಳಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಧಿಡೀರನೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರದ ಫಿಲ್ಟರ್ ಬೇಡನ ಅಂಜನಾ ಶ್ರವಣದೋಷವುಳ್ಳ ಹೆಣ್ಣು ಮಕ್ಕಳ ವಸತಿ ಶಾಲೆ, ಯುನಿವರ್ ಸಿಟಿ ಗೇಟ್ ಎದುರಿನ ಸಿದ್ಧಾರ್ಥ ಶ್ರವಣದೊಷವುಳ್ಳ ಬಾಲಕರ ಮತ್ತು ಬಾಲಕೀಯರ ವಸತಿ ಶಾಲೆಗಳಿಗೆ ಭೇಟಿ ನೀಡಿ, ಆಹಾರ ಗುಣಮಟ್ಟ, ಸ್ವಚ್ಚತೆ, ವಿವಿಧ ಮೂಲಭೂತ ಸೌಕಯ೯ಗಳನ್ನು ಪರಿಶೀಲಿಸಿ ಗುಣಮಟ್ಟ ಮತ್ತು ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಸಂಸ್ಥೆ ಸಿಬ್ಬಂದಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆ ಮುಖ್ಯಸ್ಥರು, ಹಾಸ್ಟಲ್ ವಾರ್ಡನ್ ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
Next Story





