ಕಲಬುರಗಿ | ಮಾತೃಭಾಷೆಯಲ್ಲಿ ಶಿಕ್ಷಣ ಅಗತ್ಯ: ಪ್ರೊ.ದಯಾನಂದ ಅಗಸರ

ಕಲಬುರಗಿ: ಪ್ರತಿಯೊಬ್ಬರು ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದು ಇಂದಿನ ತುರ್ತು ಅವಶ್ಯವಾಗಿದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ದಯಾನಂದ ಅಗಸರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಶಾಂತಪ್ಪಾ ಪಾಟೀಲ ನರಿಬೋಳ ಪ್ರತಿಷ್ಠಾನದಿಂದ ದಿ.ಶಾಂತಪ್ಪ ಪಾಟೀಲ ಅವರ 12ನೆ ಪುಣ್ಯ ಸ್ಮರಣೆ ಹಾಗು ಶಾಂತಶ್ರೀ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ವಿಜಯಕುಮಾರ ತೆಗಲತಿಪ್ಪಿ ಮಾತನಾಡಿ, ದಿ.ಶಾಂತಪ್ಪಾ ಪಾಟೀಲ ನರಿಬೋಳ ಅವರು ತಮ್ಮ ಮನೆಯಲ್ಲಿ ನಾಡಿನ ಪ್ರಸಿದ್ಧ ಲೇಖಕರ ಸಾವಿರಾರು ಪುಸ್ತಕಗಳನ್ನು ಸಂಗ್ರಹಿಸಿ ಜ್ಞಾನ ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಕನ್ನಡ ಅಭಿಮಾನಿಗಳಿಗೆ ಮಾದರಿಯಾಗಿದ್ದರು. ನಾವೆಲ್ಲರು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿ ಕನ್ನಡವನ್ನು ಬೆಳಗುವ ಕೆಲಸ ಮಾಡಬೇಕು ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರದ ಸಾಧಕರಾದ ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖುಬಾ, ವೈದ್ಯ ಡಾ.ಆನಂದ ಕಟಗೇರಿ ಅವರುಗಳಿಗೆ ಶಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ವಿಜೇತೆ ಜಯಂತಿಗೌಡ ಅವರನ್ನು ವಿಶೆಷವಾಗಿ ಸನ್ಮಾನಿಸಿ ಗೌರವಿಸಲಾಯಿತು. ಪಾಳಾದ ಗುರುಮೂರ್ತಿ ಶಿವಾಚಾರ್ಯರು ಗಂಗಾಧರ್ ಸ್ವಾಮಿ ಹಿರೆಮಠ ನಂದೂರ ನಾನಿದ್ದೆ ವಹಿಸಿದ್ದರು. ಕೆಕೆಸಿಸಿಐ ಅದ್ಯಕ್ಷ ಶರಣಬಸ್ಸಪ್ಪ ಪಪ್ಪಾ, ರೆವಣಸಿದ್ದಪ್ಪಾ ಸಂಕಾಲಿ, ಮಲ್ಲಿಕಾರ್ಜುನ ಕುಸ್ತಿ, ಆನಂದ ದಂಡೋತಿ, ಅಣ್ಣಾರಾಯಗೌಡ ಪಾಟೀಲ ನರಿಬೋಳ, ಗೌರಮ್ಮಗೌಡತಿ ಪಾಟೀಲ ನರಿಬೋಳ, ಗುಂಡಮ್ಮಗೌಡತಿ ಪಾಟೀಲ ನರಿಬೋಳ, ಶರಣಗೌಡ ಪೊಲೀಸ್ ಪಾಟೀಲ ನರಿಬೋಳ, ಸಂತೋಷ ಪೊಲೀಸ್ ಪಾಟೀಲ ನರಿಬೋಳ, ಶಿವಲಿಂಗ ಹಳಿಮನಿ, ಸಂದೀಪ್ ಬರಣಿ, ಲಕ್ಷ್ಮೀಕಾಂತ ಸ್ವಾದಿ, ಮಲ್ಲಿಕಾರ್ಜುನ ಕುಳಗೇರಿ, ಮಾಲಾ ದಣ್ಣುರ, ಸುಮಾ ಕವಲ್ದಾರ, ಸೆಮಿನಾ ಬೆಗಂ, ಶ್ರೀದೇವಿ ಪಾಟೀಲ, ಮಹೇಶ್ ಕೆಂಬಾವಿ ಇತರರಿದ್ದರು.
ಪ್ರತಿಷ್ಠಾನದ ಸಂಸ್ಥಾಪಕ ಎಂ.ಎಸ್ ಪಾಟೀಲ ನರಿಬೋಳ ಸ್ವಾಗತಿಸಿ ಪ್ರಾಸ್ಥಾವಿಕ ಮಾತನಾಡಿದರು. ಬಾಬುರಾವ ಕೋಬಾಳ ಪ್ರಾರ್ಥಿಸಿದರು. ರವಿಂದ್ರ ಬಂಟನಳ್ಳಿ ನಿರೂಪಿಸಿದರು.







