ಕಲಬುರಗಿ | ಮಾದಿಗ ಸಮಾಜದ ಪದಾಧಿಕಾರಿಗಳ ಆಯ್ಕೆ

ಕಲಬುರಗಿ : ಮಾದಿಗ ಸಮುದಾಯವು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದೆ, ಹಾಗಾಗಿ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಂಘಟನೆ ಅಗತ್ಯವಾಗಿದೆ ಎಂದು ಮಾದಿಗ ಸಮಾಜದ ಯುವ ಮುಖಂಡ ಕಿರಣ ಕೋರೆ ಹೇಳಿದರು
ಅವರು ಶಹಾಬಾದ್ ನಗರದ ಜಗದಂಭಾ ಮಂದಿರದ ಆವರಣದಲ್ಲಿ ಶಹಾಬಾದ್ ತಾಲ್ಲೂಕಿನ ಮಾದಿಗ ಸಮಾಜದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ, ಅವರು ಮಾತನಾಡಿದರು.
ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಿದೆ, ಈ ದಿಸೆಯಲ್ಲಿ ಮಾದಿಗ ಸಮಾಜದ ತಾಲ್ಲೂಕ ಸಮಿತಿ ರಚಿಸಲಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಒಗ್ಗಟ್ಟಿನೊಂದಿಗೆ ಸಮುದಾಯದ ಅಭಿವೃದ್ಧಿಗೆ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ತಾಲ್ಲೂಕು ಮಾದಿಗ ಸಮಾಜದ ಪದಾಧಿಕಾರಿಗಳು :
ಅಧ್ಯಕ್ಷರಾಗಿ ವಿಕ್ರಮ ಮಾಲಗತ್ತಿ, ಗೌರವಾಧ್ಯಕ್ಷರಾಗಿ ಕಿರಣ ಕೋರೆ, ಕಾರ್ಯಧ್ಯಕ್ಷರಾಗಿ ಶರಣು ಪಗಲಾಪುರ, ಮನೋಹರ ಮೇತ್ರಿ, ನಾಗರಾಜ್ ಮುದ್ನಾಳ, ಬಸವರಾಜ ತುಮಕೂರ, ಪ್ರಧಾನ ಕಾರ್ಯದರ್ಶಿಯಾಗಿ ರವಿ ಬೆಳಮಗಿ, ಮಲ್ಲೇಶಿ ಸೈದಾಪುರ, ಶ್ರೀಧರ ಕೊಲ್ಲೂರ, ನಾರಾಯಣ ಕಂದಕೂರ, ಉಪಾಧ್ಯಕ್ಷರಾಗಿ ಅಮರ ಕೋರೆ, ಪ್ರಮೋದ್ ಮಲ್ಹಾರ, ಲಕ್ಷ್ಮಿಕಾಂತ ಬಳಿಚಕ್ರ, ಜಯರಾಮ ಭಂಡಾರಿ ಜೊತೆಗೆ 10 ಜನ ಸಹಕಾರದರ್ಶಿಗಳು ಹಾಗೂ 10ಜನ ಸಂಘಟನಾ ಕಾರ್ಯದರ್ಶಿಗಳಾಗಿ ಖಜಾಂಚಿಯಾಗಿ ಸಂತೋಷ ಹುಲಿಯವರನ್ನ ಆಯ್ಕೆ ಮಾಡಲಾಗಿದೆ, ಕಾನೂನು ಸಲಹೆಗಾರರಾಗಿ ಶರಣಪ್ಪ ಭಂಡಾರಿ ಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ, ಈ ಸಭೆಯಲ್ಲಿ ತಾಲ್ಲೂಕಿನ ಮಾದಿಗ ಸಮಾಜದ ಭಾಂದವರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು ಎಂದು ಅಧ್ಯಕ್ಷ ವಿಕ್ರಮ ಮಾಲಗತ್ತಿ, ಕಾರ್ಯದರ್ಶಿ ನವೀನ ಸಿಪ್ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







