ಕಲಬುರಗಿ | ಇಂಗ್ಲೀ಼ಷ್ ಸಾಹಿತ್ಯ ಬಹಳ ಹಳೆಯ ಸಾಹಿತ್ಯ: ಡಾ.ಬಿಲಿಯನಸಿದ್ದ

ಕಲಬುರಗಿ : ಇಂಗ್ಲೀಷ್ ಸಾಹಿತ್ಯವು ಬಹಳ ಹಳೆಯ ಶ್ರೇಷ್ಠ ಸಾಹಿತ್ಯವಾಗಿದೆ ಎಂದು ಪುದುಚರಿ ಕರಿಕಲ್ ಅರಿಗರ ಅಣ್ಣ ಸರಕಾರಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿಲಿಯನಸಿದ್ದ ಕೆ.ಪೈಗೊಂಡೆ ಹೇಳಿದರು.
ನಗರದ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಗ್ಲೀಷ್ ವಿಭಾಗದಿಂದ ಹಮ್ಮಿಕೊಂಡ 'ಹಿಸ್ಟರಿ ಆಫ್ ಇಂಗ್ಲೀಷ್ ಲಿಟರೇಚರ್ ಆನ್ ಎಕ್ಸಪ್ಲೋರೇಷನ್' ಎಂಬ ವಿಷಯ ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಇಂಗ್ಲೀಷ್ ಸಾಹಿತ್ಯವು ಇಂಗ್ಲೀಷ್ ಮಾತನಾಡುವ ಪ್ರಪಂಚದಿಂದ ಇಂಗ್ಲೀಷ್ ಭಾಷೆಯಲ್ಲಿ ಬರೆಯಲ್ಪಟ್ಟ ಸಾಹಿತ್ಯವಾಗಿದೆ. ಇದು 1,400 ವರ್ಷಗಳಿಗೂ ಹೆಚ್ಚು ಕಾಲ ಅಭಿವೃದ್ಧಿಗೊಂಡಿದೆ. ಕವಿ ಮತ್ತು ನಾಟಕಕಾರ ವಿಲಿಯಂ ಶೇಕ್ಸಪಿಯರ್ ಇಂಗ್ಲೀಷ್ ಭಾಷೆಯ ಶ್ರೇಷ್ಠ ಬರಹಗಾರರಾಗಿ ಇಂಗ್ಲೀಷ್ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. 16ನೇ ಶತಮಾನದ ಅಂತ್ಯ ಮತ್ತು 18ನೇ ಶತಮಾನದ ಆರಂಭದ ನಡುವೆ ಬ್ರಿಟಿಷ್ ಸಾಮ್ರಾಜ್ಯದ ಬೆಳವಣಿಗೆಯೊಂದಿಗೆ ಇಂಗ್ಲೀಷ್ ಭಾಷೆ ಪ್ರಪಂಚದಾದ್ಯಂತ ಹರಿಡಿತು ಎಂದು ಇಂಗ್ಲೀಷ್ ಸಾಹಿತ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲಿದರು ಎಂದರು.
ವೇದಿಕೆ ಮೇಲೆ ಪ್ರಾಧ್ಯಾಪಕರಾದ ಡಾ.ಸೀಮಾ ಪಾಟೀಲ, ಕೃಪಾಸಾಗರ ಗೊಬ್ಬುರ್ ಇದ್ದರು. ಪ್ರೀತಿ ಬಿರಾದಾರ ಮುಖ್ಯ ಅತಿಥಿಗಳ ಪರಿಚಯ ಮಾಡಿದರೆ, ಭೀಮಸೇನ್ ಜೋಷಿ ಸ್ವಾಗತಿಸಿದರು.





