ಕಲಬುರಗಿ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಿವ ಅಷ್ಠಗಿ

ಕಲಬುರಗಿ : ಪರಿಸರ ಸಂರಕ್ಷಣೆ, ಹೆಚ್ಚು ಸಸಿಗಳನ್ನು ನೆಡುವುದು, ಈ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವ ಅಷ್ಠಗಿ ಹೇಳಿದರು.
ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಕಲಬುರಗಿ ನಗರದ ಐವಾನ್ ಶಾಹಿಯಲ್ಲಿ ಸಸಿಗಳನ್ನು ನೆಟ್ಟು ಅವರು ಮಾತನಾಡಿದರು.
ನಗರ ಜಿಲ್ಲಾ ಅಧ್ಯಕ್ಷ ಮಹೇಶ್ ಚವ್ಹಾಣ ಮಾತನಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರೀತಮ್ ಪಾಟೀಲ್, ಪ್ರಧಾನ ಕಾರ್ಯದರ್ಶಿಗಳಾದ ಚೆನ್ನು ಭಂಗೆ, ಶರಣು ಲೇಂಗಟಿ, ಉಪಾಧ್ಯಕ್ಷರಾದ ಶಿವಲಿಂಗ ಪಾಟೀಲ್, ಸೌರಭ್ ರಂಗದಾಳ, ಕಾರ್ಯದರ್ಶಿಗಳಾದ ನಾರಾಯಣ, ನಾರಾಯಣ ಜಾಕೀರ್ದಾರ್, ಸಚಿನ್ ಬನ್ನಿ, ಮುಖಂಡರಾದ ಅಮಿತ್ ಕುಲಕರ್ಣಿ, ನಿಜಗುಣಗೌಡ ಯಲಗೋಡ, ಡಾ.ಅಭಿ ಅವರಾದಿ, ದರ್ಶನ್ ಬಾಸುತಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





