ಕಲಬುರಗಿ | ಪ್ರತಿಯೊಬ್ಬರು ಭಾತೃತ್ವದ ಬೆಸುಗೆಯ ಕೊಂಡಿಯಾಗಿ : ಕಾರಾಗೃಹದ ಅಧೀಕ್ಷಕಿ ಡಾ.ಅನಿತಾ ಆರ್.

ಕಲಬುರಗಿ: ಕೇಂದ್ರ ಕಾರಾಗೃಹದ ಒಳಾವರಣದಲ್ಲಿ ಪ್ರಜಾ ಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿಧ್ಯಾಲಯ ವತಿಯಿಂದ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಬಂದಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ರಾಖಿ ಕಟ್ಟುವುದರ ಜೊತೆಗೆ ಸಹಿ ಹಂಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರಾಗೃಹದ ಮುಖ್ಯ ಅಧೀಕ್ಷಕರಾದ ಡಾ. ಅನಿತಾ ಆರ್. ಕಾರ್ಯಕ್ರಮದ ಘನ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಭಾತೃತ್ವದ ಬೆಸುಗೆಯ ಕೊಂಡಿಯಾಗಿ ನಿರಂತರವಾಗಿ ಯಾವುದೇ ಪ್ರಲೋಭಕ್ಕೆ ಆಸ್ಪದ ಕೊಡದ ರೀತಿಯಲ್ಲಿ ಜೀವನವನ್ನು ನಡೆಸಿ ಬೇರೆಯವರಿಗೆ ಮಾದರಿಯಾಗಿ ಬಾಳಬೇಕೆಂದು ಕರೆ ನೀಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಬ್ರಹ್ಮಕುಮಾರಿ ದಾನೇಶ್ವರಿ ಅಕ್ಕನವರು ರಕ್ಷಾ ಬಂಧನ ರಹಸ್ಯದ ಬಗ್ಗೆ ತಿಳಿಸಿದರು. ಸವಿತಾ ಅಕ್ಕನವರು ಈಶ್ವರಿಯ ಸಂದೇಶವನ್ನು ಕುರಿತು ಬಂದಿಗಳಿಗೆ ತಿಳಿ ಹೇಳಿದರಂತೆ ಜೀವನದಲ್ಲಿ ಅಳವಡಿಸಿಕೊಳ್ಳಲು ತಿಳಿಸಿದರು.
ಬ್ರಹ್ಮಕುಮಾರಿ ರಾಗಿಣಿ ಅಕ್ಕನವರು ಬ್ರಹ್ಮಕುಮಾರಿ ಈಶ್ವರಿಯ ಈಶ್ವರಿಯ ವಿಶ್ವವಿಧ್ಯಾಲಯದ ಸಂಸ್ಥೆಯ ಪರಿಚಯ ಮಾಡಿಕೊಟ್ಟರು. ಎಲ್ಲಾ ಬಂದಿಗಳಿಗೆ ಮತ್ತು ಸಿಬ್ಬಂದಿಗಳಿಗೆ ರಾಖಿ ಕಟ್ಟಿಸಿ ಸಹಿ ಹಂಚಲಾಯಿತು.ಈ ಸಂಸ್ಥೆಯ ಅಧೀಕ್ಷ ಎಂ.ಹೆಚ್. ಆಶೇಖಾನ್ ಸ್ವಾಗತಿಸಿದರು. ಸಂಸ್ಥೆಯ ಶಿಕ್ಷಕರಾದ ನಾಗರಾಜ ಮೂಲಗೆ, ನಿರೂಪಿಸಿದರು. ಸಹಾಯಕ ಅಧೀಕ್ಷಕರಾದ ಚನ್ನಪ್ಪ ಯಟಗಾರ ವಂದಿಸಿದರು.
ಸಂಸ್ಥೆಯ ಜೈಲರ್‍ಗಳಾದ ಸುನಂದ. ವಿ, ಶ್ಯಾಮ ಬಿದರಿ, ಶ್ರೀಮಂತಗೌಡ ಪಾಟೀಲ್ ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿ/ಸಿಬ್ಬಂದಿಗಳು ಭಾಗವಹಿಸಿದರು.







