ಕಲಬುರಗಿ | ಸೇಡಂ ಪಥ ಸಂಚಲನದಲ್ಲಿ ಪಾಲ್ಗೊಂಡ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ

ಕಲಬುರಗಿ: ರವಿವಾರ ಸೇಡಂ ಪಟ್ಟಣದಲ್ಲಿ ನಡೆದಿರುವ ಆರೆಸ್ಸೆಸ್ ಪಥ ಸಂಚಲನದಲ್ಲಿ ಸೇಡಂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಪಾಲ್ಗೊಂಡಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ.
ಸೇಡಂ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ ಗಣವೇಷಧಾರಿಯಾಗಿ ಪಥ ಸಂಚಲನದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಬಾರಿಯ ಪಥ ಸಂಚಲನದಲ್ಲಿ ಸರ್ಕಾರಿ ನೌಕರರು ಭಾಗಿಯಾಗಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ಇತ್ತೀಚೆಗೆ ಪಥ ಸಂಚಲನದಲ್ಲಿ ಭಾಗಿಯಾದ ರಾಯಚೂರಿನ ಪಿಡಿಒ ಓರ್ವನನ್ನು ಅಮಾನತು ಮಾಡಲಾಗಿತ್ತು.
ಇದೀಗ ರವಿವಾರ ನಡೆದಿದ್ದ ಆರೆಸ್ಸೆಸ್ ಪಥ ಸಂಚಲನದಲ್ಲಿ ಸರ್ಕಾರಿ ವೈದ್ಯಾಧಿಕಾರಿಯೇ ಗಣವೇಷ ಧರಿಸಿ ಪಥ ಸಂಚಲನ ನಡೆಸಿದ್ದಾರೆ.
ಇದೇ ಪಥಸಂಚಲನದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿರುವ ಸುದ್ದಿ ಹರಿದಾಡುತ್ತಿದೆ.
Next Story





