ಕಲಬುರಗಿ | ಸೆ.19 ರಂದು ಹಾಪ್‌ಕಾಮ್ಸ್ ವಾರ್ಷಿಕ ಮಹಾ ಸಭೆ
ಕಲಬುರಗಿ : ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ತೋಟಗಾರಿಕೆ ಹುಟ್ಟುವಳಿ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ ನಿಯಮಿತ (ಹಾಪ್ ಕಾಮ್ಸ್) ಇದರ 2024-25ನೇ ಸಾಲಿನ 26ನೇ ವಾರ್ಷಿಕ ಮಹಾಸಭೆ ಸೆ.19 ರಂದು ಬೆಳಿಗ್ಗೆ 11.30 ಗಂಟೆಗೆ ಕಲಬುರಗಿ ನಗರದ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣ ಹಿಂದುಗಡೆ ರಾಜಾಪೂರ ರಸ್ತೆಯಲ್ಲಿರುವ ಬಡೇಪುರ ತೋಟಗಾರಿಕೆ ಸಸ್ಯ ಕ್ಷೇತ್ರದ ಸಂಘದ ಕಾರ್ಯಾಲಯದ ಆವರಣದಲ್ಲಿ ನಡೆಯಲಿದೆ.
ಸಂಘದ ಅಧ್ಯಕ್ಷ ಗುರುಶಾಂತ ದ್ವಿ.ಪಾಟೀಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಗೂ ಸರ್ವ ಸದಸ್ಯರುಗಳು ಹಾಜರಿದ್ದು ವಾರ್ಷಿಕ ಮಾಹಾಸಭೆಯನ್ನು ಯಶಸ್ವಿಗೊಳಿಸಬೇಕೆಂದು ಸಂಗದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು ವಾರ್ಷಿಕ ಮಹಾಸಭೆಯಲ್ಲಿ ಪ್ರಶ್ನೆ ಕೇಳಲಿಚ್ಛಿಸುವ ಸದಸ್ಯರು ತಮ್ಮ ಪ್ರಶ್ನೆಯನ್ನು 4 ದಿವಸ ಮುಂಚಿತವಾಗಿ ಲಿಖಿತ ರೂಪದಲ್ಲಿ ಸಂಘದ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ.
Next Story





