ಕಲಬುರಗಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಗೆ ಬೆಂಕಿ

ಕಲಬುರಗಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯೊಂದು ಹೊತ್ತಿ ಉರಿದ ಘಟನೆ ಕಲಬುರಗಿ ತಾಲ್ಲೂಕಿನ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ.
ಮಾಲಗತ್ತಿ ಗ್ರಾಮದ ಲಕ್ಷ್ಮೀಬಾಯಿ ಎಂಬುವವರಿಗೆ ಸೇರಿದ ಮನೆ ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ.
ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಯಿಂದ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗೃಹೋಪಯೋಗಿ ವಸ್ತುಗಳು, ಧವಸಧಾನ್ಯ ಹಾಗು ದಾಖಲೆಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.
ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನ ಕಳೆದುಕೊಂಡು ಮನೆ ಮಾಲಕಿ ಲಕ್ಷ್ಮೀಬಾಯಿ ಕಂಗಾಲಾಗಿದ್ದು, ಕೂಡಲೇ ಸರಕಾರ ಪರಿಹಾರ ಘೋಷಿಸಬೇಕೆಂದು ನೆರೆಹೊರೆಯವರು ಆಗ್ರಹಿಸಿದ್ದಾರೆ.
ಈ ಘಟನೆಯು ಗುಲ್ಬರ್ಗ ವಿವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Next Story





