ಕಲಬುರಗಿ | ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಇಫ್ತಾರ್ ಕೂಟ

ಕಲಬುರಗಿ : ಚಿಂಚೋಳಿ ಪಟ್ಟಣದ ಚಂದಾಪುರದ ಪಟೇಲ್ ಕಾಲೋನಿಯ ಮದರಸದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಮುಸ್ಲಿಂ ಬಾಂಧವರ ಪವಿತ್ರ ರಮಝಾನ್ ಹಬ್ಬದ ಅಂಗವಾಗಿ ತಾಲೂಕು ವೀರಶೈವ ಲಿಂಗಾಯತ ಸಮಾಜ ವತಿಯಿಂದ ಇಫ್ತಾರ್ ಕೂಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹಮ್ಮದ್ ಗಫರ್ ಅವರು ಮಾತನಾಡಿ, ಪವಿತ್ರ ರಮಝಾನ್ ಹಬ್ಬದ ಅಂಗವಾಗಿ ತಾಲೂಕು ವೀರಶೈವ ಸಮಾಜ ವತಿಯಿಂದ ವತಿಯಿಂದ ಇಫ್ತಾರ್ ಮತ್ತು ಊಟದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಒಳ್ಳೆಯ ಉತ್ತಮ ಕಾರ್ಯಕ್ರಮ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಎಂ ಬಾರಿ, ಮತ್ತು ಅಬ್ದುಲ್ ಬಾಸಿದ್ ಅವರು ಮಾತನಾಡಿ, ಚಿಂಚೋಳಿ ತಾಲೂಕಿನಲ್ಲಿ ಹಿಂದೂ ಮುಸ್ಲಿಂ ಬಾಂಧವರು ಅಣ್ಣ ತಮ್ಮಾರಂತೆ ಬೆರೆತುಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷರಾದ ಸಂಜೀವಕುಮಾರ ಪಾಟೀಲ್, ತಾಲೂಕು ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿಗಳಾದ ವೀರೇಶ ದೇಸಾಯಿ ಚಿಮ್ಮಾಇದಲಾಯಿ, ವೀರಶೈವ ಲಿಂಗಾಯತ ಸಮಾಜದ ಹಿರಿಯ ಮುಖಂಡರಾದ ಪ್ರದೀಪ ದೇಶಮುಖ್ ಪೋಲಕಪಳ್ಳಿ, ರೇವಣಸಿದ್ದಪ್ಪ ದಾದಾಪೂರ, ಡಾ.ವಿಜಯ ಕುಮಾರ್ ಬೆಳಕೇರಿ, ಚಂದ್ರಶೇಖರ್ ಪಾರ, ರವೀಂದ್ರ ಬಂಡೆಪ್ಪನೋರ, ಚೆನ್ನವೀರ ಪಾಟೀಲ್ ದೇಗಲಮಡಿ, ಸಿದ್ದಣ್ಣ ಪಾಟೀಲ್, ವಿವೇಕ್ ಪಾಟೀಲ ದೇಗಲಮಡಿ, ಶ್ರೀಧರ್ ಪಾಟೀಲ ದೇಗಲಮಡಿ, ಮುಸ್ಲಿಂ ಸಮಾಜದ ಮುಖಂಡರಾದ ಕೆ.ಎಂ ಬಾರಿ, ಅಬ್ದುಲ್ ಬಾಸಿದ, ಮಕಸೂದ ಸೌದಾಗರ್, ಮತಿನ ಸೌದಾಗರ್, ಖಲಿಲ ಪಟೇಲ್, ಸತ್ತರ್ ಪಟೇಲ್, ಮುಹಮ್ಮದ್ ನೋಮನ್ ಪಟೇಲ್, ಇಸ್ಮಾಯಿಲ್ ಪಟೇಲ್, ನಿಂಬಾಜಿ ಚವ್ಹಾಣ, ಮತ್ತು ಅನೇಕ ಮದೀನಾ ಮಸ್ಜಿದ್ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.







