ಬೀದರ್ | ಅಲ್ಲಮ ಪ್ರಭು ಜಾತೆಯಲ್ಲಿ ಉಚಿತ ದಂತ ತಪಾಸಣೆ

ಬೀದರ್ : ನಗರದ ಹತ್ತಿರವಿರುವ ಅಷ್ಟೂರ್ ಗ್ರಾಮದಲ್ಲಿ ಅಲ್ಲಮ ಪ್ರಭು ಜಾತ್ರಾ ಸಮಿತಿ, ಎಸ್.ಬಿ.ಪಾಟೀಲ್ ದಂತ ಮಹಾವಿದ್ಯಾಲಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆ ಹಾಗೂ ಸಂಗಮ ವೆಲ್‌ಫೇರ್ ಎಜುಕೇಶನ್ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಇಂದು ಉಚಿತ ದಂತ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಶಿಬಿರವನ್ನು ಶಿವರಾಯ ಒಡೆಯರ್ ಸ್ವಾಮೀಜಿಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. 92 ಜನರು ದಂತ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಶಿಬಿರದ ಅಧ್ಯಕ್ಷ ಶಶಿಧರ್ ಪಾಟೀಲ್, ಡಾ.ಸಿದ್ದನಗೌಡ, ಡಾ.ರಮೇಶ ಓತಿ, ಸಂಗಮ ವೆಲ್‌ಫೇರ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶರಣಪ್ಪಾ ಹಾಗೂ 10 ಜನ ದಂತ ವೈದ್ಯರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Next Story





