ಕಲಬುರಗಿ | ಸುಲೇಪೇಟ ಗ್ರಾಮದಲ್ಲಿ ಬಾಬೂಜಿ ಮೂರ್ತಿ ಸ್ಥಾಪನೆ : ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ

ಕಲಬುರಗಿ: ಸುಲೇಪೇಟ ಗ್ರಾಮದಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ ಮೂರ್ತಿಯನ್ನು ಬರುವ ದಿನಗಳಲ್ಲಿ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಭರವಸೆ ನೀಡಿದರು.
ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದ ಎಸ್ಟಿ ಭವನದಲ್ಲಿ ಹಮ್ಮಿಕೊಂಡ ಡಾ.ಬಾಬು ಜಗಜೀವನ ರಾಮ್ ಅವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸುಲೇಪೇಟ ಗ್ರಾಮದ ಮಾದಿಗ ಸಮಾಜದ ಮುಖಂಡರು ಗ್ರಾಮದಲ್ಲಿ ಒಂದು ಭವನ ಮತ್ತು ಮೂರ್ತಿ ಪ್ರತಿಷ್ಟಾಪನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ, ಬರುವ ದಿನಗಳಲ್ಲಿ ಅವರ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ ಮಾತನಾಡಿ, ಭಾರತದ ಕೃಷಿಯಲ್ಲಿ ಮಹತ್ತರವಾದ ಬದಲಾವಣೆಯನ್ನು ಮಾಡಿ, ಕೃಷಿಯಲ್ಲಿ ಉನ್ನತೀಕರಣ ಸೃಷ್ಟಿಸಿದ ಡಾ.ಬಾಬು ಜಗಜೀವನರಾಂ ಅವರು ಹಸಿರು ಕಾಂತ್ರಿಯ ಹರಿಕಾರರು. ಭಾರತ ದೇಶಕ್ಕೆ ಅವರ ಕೊಡಗು ಅಪಾರವಾಗಿದೆ ಎಂದರು.
ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್, ಬಾಲರಾಜ ಗುತ್ತೇದಾರ್, ಗೋಪಾಲರಾವ್ ಕಟ್ಟಿಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ದೋಡೇಂದ್ರ ಸ್ವಾಮಿಗಳು, ಜಯಂತಿ ಸಮಿತಿಯ ಅಧ್ಯಕ್ಷ ವಿನೋದ ಕುಮಾರ್, ಗೋಪಾಲರಾವ ಕಟ್ಟಿಮನಿ, ಮಹಾರುದ್ರಪ್ಪ ದೇಸಾಯಿ, ಬಸವರಾಜ ಸಜ್ಜನ, ತಾಹೇರ ಪಟೇಲ, ಅತೀಷ ಪವಾರ, ಮೇಘರಾಜ ರಾಠೋಡ್, ಮಸ್ತಾನ ಅಲಿ ಪಟ್ಟೆದ್ದಾರ, ಬಸವರಾಜ ಬಿರಾದಾರ, ಚಾಂದಪಾಶಾ ಮೋಮಿನ, ಆನಂದ ಟೈಗರ್, ರೇವಣಸಿದ್ದಪ್ಪ ಅಣಕಲ್, ಸಂತೋಷ ರಾಠೋಡ್, ಶಿವಕುಮಾರ್ ಕೊತ್ತಪೇಟ, ಬಾಬಣ್ಣ ಗುಲಗುಂಜಿ, ವಿಜಯಕುಮಾರ್ ಕೋರಡಂಪಳ್ಳಿ, ಸಂಪತ ಬೆಳ್ಳಿಚುಕ್ಕಿ, ಸುನೀಲ ಸಲಗಾರ್, ಅಮರೇಶ ಗೋಣಿ,ನಸೀರ ಹುಸ್ಸೇನ್ ಮದರಗಿ, ರಾಜಕ ಪಟೇಲ್, ಶಿವಕುಮಾರ್ ಸಜ್ಜನ, ಸುನೀಲ ಕಪೂರ್, ಆಕಾಶ ಕೊಳ್ಳೂರ್ ಇತರರು ಕಾರ್ಯಕ್ರಮದಲ್ಲಿ ಇದ್ದರು.
ಡಾ.ಬಾಬು ಜಗಜೀವನ ರಾಮ್ ಜಯೋತ್ಸವದ ಪ್ರಯುಕ್ತ ಸುಲೇಪೇಟ ಗ್ರಾಮದ ಡಾ.ಬಾಬು ಜಗಜೀವನರಾಮ್ ವೃತ್ತದಿಂದ ಬಸವೇಶ್ವರ ಮಾರ್ಗವಾಗಿ ಪ್ರಮುಖ ರಸ್ತೆಯಿಂದ ಎಸ್ಟಿ ಭವನದವರೆಗ ಬೃಹತ್ ಮೆರವಣಿಗೆ ಮಾಡಲಾಯಿತು.







