ಕಲಬುರಗಿ | ಒಳ ಮೀಸಲಾತಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯ : ಸಿದ್ದನಾಯಕ

ಕಲಬುರಗಿ: ಒಳ ಮೀಸಲಾತಿ ಜಾರಿಯಿಂದ ಬಂಜಾರ ಸಮಾಜಕ್ಕೆ ಅನ್ಯಾಯವಾಗಿದೆ. ಇದನ್ನು ಪ್ರಶ್ನಿಸಿ ನ್ಯಾಯಲಯದಿಂದ ತಡೆಯಾಜ್ಞೆ ತರಲಾಗಿದ್ದು, ಯಾರು ಭಯಪಡುವ ಅವಶ್ಯಕತೆ ಇಲ್ಲ. ಎಲ್ಲರೂ ಸಂಘಟಿತರಾಗಿರೋಣ ಎಂದು ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದನಾಯಕ ಹೇಳಿದ್ದರು.
ಚಿಂಚೋಳಿ ಪಟ್ಟಣದ ಚಂದಾಪೂರದ ಬಂಜಾರ ಭವನದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘ ಹಾಗೂ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ತಾಲ್ಲೂಕು ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಯಡಿ ಉದ್ಯೋಗ ನೀಡಲಾಗುತ್ತಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಸ್ಪಂದಿಸುವ ಕೆಲಸ ಬಂಜಾರ ಸೇವಾ ಸಂಘ ನಿರಂತರವಾಗಿ ಮಾಡುತ್ತಿದೆ ಎಂದರು.
ಸಮಾಜದವರು ಸಾಮಾಜಿಕವಾಗಿ ಸಾಕಷ್ಟು ಕಷ್ಟ, ದುಃಖ ಅನುಭವಿಸಿದ್ದಾರೆ. ನಮ್ಮ ವೇಷಭೂಷಣ, ಕಲೆ, ಸಂಸ್ಕೃತಿಯು ದೇಶದಲ್ಲಿ ಹೆಮ್ಮೆಯ ಸಂಗತಿಯಾಗಿದೆ. ತಾಂಡಾಗಳ ಮಟ್ಟದಲ್ಲಿ ಬಂಜಾರ ಸಮಾಜದ ಸಮಸ್ಯೆಗಳನ್ನು ಆಲಿಸಲು ಪ್ರತಿಯೊಂದು ತಾಂಡಾಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳು ಸ್ಥಳದಲ್ಲೇ ನಿವಾರಿಸುವ ಪ್ರಯತ್ನ ಮಾಡಬೇಕು ಎಂದು ಮಾಜಿ ಸಂಸದ ಡಾ.ಉಮೇಶ್ ಜಾಧವ್ ಸಂಘಕ್ಕೆ ಕಿವಿಮಾತು ಹೇಳಿದರು.
ಸಂಘದ ಗೌರವಧ್ಯಕ್ಷರಾಗಿ ಅಶೋಕ ಚವ್ಹಾಣ, ಅಧ್ಯಕ್ಷರಾಗಿ ಪ್ರೇಮಸಿಂಗ್ ಜಾಧವ, ಉಪಾಧ್ಯಕ್ಷರಾಗಿ ರಾಜು ಪವ್ಹಾರ,ಖಜಾಂಚಿ ರಮೇಶ ರಾಠೋಡ,ಪ್ರಧಾನ ಕಾರ್ಯದರ್ಶಿ ಗೋಪಾಲ ಜಾಧವ ಸೇರಿದಂತೆ ಅನೇಕರಿಗೆ ಸನ್ಮಾನಿಸಿ ಗೌರವಿಸಿ ಸಿದ್ದನಾಯಕ ಹಾಗೂ ಜಿಲ್ಲಾಧ್ಯಕ್ಷ ಬಿ.ಬಿ.ನಾಯಕ ಅವರು ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಲಾಯಿತು.
ಸೋಮು, ಗೋಪಾಲಸಿಂಗ್, ಆನಂದ, ಲಕ್ಷ್ಮಣ ಚವ್ಹಾಣ ಮಾತನಾಡಿದರು.
ನೂತನ ಅಧ್ಯಕ್ಷ ಪ್ರೇಮಸಿಂಗ್ ಜಾಧವ ಸ್ವಾಗತಿಸಿದರು. ಗೋಪಾಲ ಜಾಧವ ನಿರೂಪಿಸಿದರು. ಶಾಮರಾವ ಮಾಸ್ಟರ್ ವಂದಿಸಿದರು. ಕೃಷ್ಣ ಜಾಧವ, ಭೀಮರಾವ, ರೇಣುಕಾ ಅಶೋಕ ಚವ್ಹಾಣ,ಸವಿತಾಬಾಯಿ,ಗೋಪಾಲರಾವ ಕಟ್ಟಿಮನಿ, ರತಿಬಾಯಿ,ನಾಗವೇಣಿ, ಧನಂಜಯ, ರಮೇಶ, ಕೆ.ಎಂಬಾರಿ, ಭೀಮಶೇಟ್ಟಿ ಮುರುಡಾ, ಶಿವಯೋಗಿ ರುಸ್ತಾಂಪೂರ, ಸಂತೋಷ ಗಡಂತಿ, ಸತೀಶರೆಡ್ಡಿ ತಾದಲಾಪೂರ, ಹೀರಾಸಿಂಗ್ ರಾಠೋಡ ಚೌಕಿತಾಂಡಾ, ಜಗನ್ನಾಥ ಜಾಧವ ಸೇರಿದಂತೆ ಅನೇಕರಿದ್ದರು.







