ಕಲಬುರಗಿ | ʼಜೂನಿಯರ್ ಸೀಝನ್ 2ʼ ವಿಜ್ಞಾನ ಮೇಳ ಸಮಾರಂಭ

ಕಲಬುರಗಿ: ನಗರದ ಪ್ರತಿಷ್ಠಿತ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಸಿ.ಬಿ.ಎಸ್.ಇ ಶಾಲೆಯಲ್ಲಿ ಜೂನಿಯರ್ ಸೀಝನ್ 2 ವಿಜ್ಞಾನ ಮೇಳ ಸಮಾರಂಭವು ಅದ್ದೂರಿಯಾಗಿ ನಡೆಯಿತು.
ಶಾಲೆಯ ಸಭಾಭವನದಲ್ಲಿ ಆಯೋಜಿಸಿದ್ದ ಜುನಿಯರ್ ಸೀಝನ್ 2 ವಿಜ್ಞಾನ ಮೇಳ ಸಮಾರಂಭದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.
ಜುನಿಯರ್ ಸೀಝನ್ 2 ವಿಜ್ಞಾನ ಮೇಳ ಸಮಾರಂಭವನ್ನು ಪ್ರೊ.ಡಾ.ಬಿ.ಆರ್.ಕೇರೂರ್ ಅವರು ಉದ್ಘಾಟಿಸಿದರು. ವಿಜ್ಞಾನ ಮೇಳ ಸಮಾರಂಭದಲ್ಲಿ ಭಾಗಿಯಾದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಲಬುರಗಿಯ 22 ವಿವಿಧ ಶಾಲೆಯ ಮಕ್ಕಳು ವಿಜ್ಞಾನ ಮೇಳದಲ್ಲಿ ಭಾಗಿಯಾಗಿ ವಿಜ್ಞಾನ ಸಂಭಂದಿಸಿದ ವಿವಿಧ ವಸ್ತುಗಳನ್ನು ತಯಾರಿಸಿ ಪ್ರದರ್ಶನ ಮಾಡುವ ಮೂಲಕ ಗಮನ ಸೆಳೆದರು.
ಸಮಾರಂಭದಲ್ಲಿ ಡಾ.ಪುನಮ್ ಆಂಜನೆಯ, ಡಾ.ಚಂದ್ರಶೇಖರ ಚಿಕ್ಕೆಗೌಡ, ದಾಮೋದರ ರಘೋಜಿ ಮೆಮೋರಿಯಲ್ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ರಾಮಚಂದ್ರ ಡಿ ರಘೋಜಿ, ಕಾರ್ಯದರ್ಶಿ ಶ್ರೀಮತಿ ಮೀರಾ ಆರ್ ರಘೋಜಿ, ಟ್ರಸ್ಟಿ ಮನುಶ್ರೀ ಆರ್ ರಘೋಜಿ, ಚೇರ ಪರ್ಸನ್ ನಂದಿನಿ ಆರ್ ರಘೋಜಿ, ಶಾಲೆಯ ಪ್ರಾಂಶುಪಾಲರಾದ ಪ್ರಮೋದ ಮಳೆಕರ್, ಕಾಲೇಜಿನ ಪ್ರಾಂಶುಪಾಲರಾದ ಶಿವಕುಮಾರ, ಆಡಳಿತ ಅಧಿಕಾರಿ ನಾಗೇಶ್ ಕಮಲಾಪೂರೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.





