ಕಲಬುರಗಿ | ಕಾರಿನ ಗಾಜು ಒಡೆದು ಲ್ಯಾಪ್‌ಟಾಪ್ ಕಳವು : ಪ್ರಕರಣ ದಾಖಲು

ಕಲಬುರಗಿ : ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಅದರಲ್ಲಿನ ಲ್ಯಾಪ್‌ಟಾಪ್ ಕಳವು ಮಾಡಿದ ಘಟನೆ ನಗರದ ಹಳೆ ಜೇವರ್ಗಿ ರಸ್ತೆಯ ನಾಗರಾರ್ಜುನ್ ಲಾಡ್ಜ್ ಬಳಿ ನಡೆದಿದೆ.
ಓರ್ವ ವೃದ್ಧ ಸಹಿತ ನಾಲ್ವರು ಸೇರಿಕೊಂಡು ರಸ್ತೆ ಬದಿ ನಿಲ್ಲಿಸಲಾಗಿದ್ದ ಬೆಲೆನೋ ಕಾರಿನ ಎಡಬದಿ ಗಾಜು ಒಡೆದು ಲ್ಯಾಪ್‌ಟಾಪ್ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಲ್ಯಾಪ್‌ಟಾಪ್ ಕಳ್ಳತನ ಮಾಡುತ್ತಿರುವ ಕೃತ್ಯದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಈ ಕುರಿತು ಸ್ಟೇಷನ್ ಬಝಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





