ಕಲಬುರಗಿ | ಶಾಸಕ ಯತ್ನಾಳ್ ಹೇಳಿಕೆಗೆ ಮಹಾಂತಪ್ಪ ಸಂಗಾವಿ ಆಕ್ರೋಶ

ಕಲಬುರಗಿ: ವಿಜಯಪುರ ನಗರ ಶಾಸಕ ಬಸವರಾಜ ಪಾಟೀಲ್ ಯತ್ನಾಳ್ ಅವರು ದಲಿತ ಮಹಿಳೆಯರು ಚಾಮುಂಡೇಶ್ವರಿ ದೇವಿಗೆ ಪೂಜೆ ಮಾಡಲು ಅರ್ಹರಲ್ಲ ಎಂಬ ಹೇಳಿಕೆಗೆ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಯತ್ನಾಳ್ ಹೇಳಿಕೆ ಅತ್ಯಂತ ಹೀನಾಯವಾಗಿದ್ದು, ಅಸಂವಿಧಾನಿಕ ಮತ್ತು ಸಮಾಜದಲ್ಲಿ ಅಸಮಾನತೆಯನ್ನು ಬೆಳೆಸುವಂತದ್ದು. ಭಾರತೀಯ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡಿದೆ.
ಧರ್ಮ, ಜಾತಿ, ಲಿಂಗ ಇವುಗಳ ಆಧಾರದ ಮೇಲೆ ಯಾರನ್ನೂ ಬೇರ್ಪಡಿಸಲು ಅವಕಾಶವಿಲ್ಲ. ದಲಿತ ಮಹಿಳೆಯರ ಗೌರವ ಮತ್ತು ಹಕ್ಕಿಗೆ ಧಕ್ಕೆ ತರುವ ಹೇಳಿಕೆಯನ್ನು ಯತ್ನಾಳ್ ತಕ್ಷಣ ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.
Next Story





