ಕಲಬುರಗಿ | ನಗರದಲ್ಲಿ ನೀರು ಸರಬರಾಜು ಕ್ಷೇತ್ರದ ಮ್ಯಾಪಿಂಗ್ ಸಮೀಕ್ಷೆಗೆ ಚಾಲನೆ

ಕಲಬುರಗಿ: ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (ಕುಸ್ಸೆಂಫ್) ಅಡಿಯಲ್ಲಿ ಕಲಬುರಗಿ ನಗರದಲ್ಲಿ 24X7 ನಿರಂತರ ನೀರು ಸರಬರಾಜು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಬುಧವಾರ ವಾರ್ಡ್ ನಂ.5, 6 ಮತ್ತು 23 ಜೋನ್ ನಂ. 38ಎ ರಲ್ಲಿ ಮ್ಯಾಪಿಂಗ್ ಸಮೀಕ್ಷೆಗೆ ಕಲಬುರಗಿ ಮಹಾನಗರ ಪಾಲಿಕೆಯ ಚುನಾಯಿತ ಸದಸ್ಯರಾದ ದಿಗಂಬರ ನಾಡಗೌಡ, ಅರುಣಾಬಾಯಿ ಹಾಗೂ ಗಂಗಮ್ಮ, ಬಸವರಾಜ ಮೂನಹಳ್ಳಿ ಅವರು ಮಂಗಳವಾರ ಚಾಲನೆ ನೀಡಿದರು.
ಈ ಜೋನ್‍ನಲ್ಲಿ ಮೂನಿಮ್ಮ ಸಂಘ, ಗಾಂಧಿನಗರ, ಸಂಜಯನಗರ, ಭವಾನಿ ನಗರ, ಚನ್ನವೀರ ನಗರ, ಇತ್ಯಾದಿಗಳ ಏರಿಯಾಗಳಲ್ಲಿ ಮ್ಯಾಪಿಂಗ್ ಸರ್ವೆ (Mapping Survey) ಮಾಡಲಾಗುತ್ತದೆ. ಅಂದಾಜು 2558 ಮನೆಗಳ ಸಮೀಕ್ಷೆ ಕೈಗೊಳ್ಳಬಹುದಾಗಿದೆ ಎಂದು ಮೆ ಎಲ್ & ಟಿ ಕಂಪನಿಯ ಸಮಾಜಿಕ ತಜ್ಞರಾದ ಲಿಂಗರಾಜ್ ಹೀರಾ ರವರು ತಿಳಿಸಿದರು.
ಈ ಯೋಜನೆಯಡಿ ನಗರದಲ್ಲಿರುವ ಪ್ರತಿ ಮನೆಗೆ ನಳ ಸಂಪರ್ಕ ಒದಗಿಸುವ ಗುರಿ ಹೊಂದಿದೆ. ಇದಕ್ಕಾಗಿ ನಳ ಸಂಪರ್ಕದ ಪೂರ್ವದಲ್ಲಿ ಗ್ರಾಹಕರ-ನೀರು ಬಳಕೆದಾರರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ನಗರದಲ್ಲಿರುವ 55 ವಾರ್ಡಗಳನ್ನು 47 ಜೋನಗಳಾಗಿ ಹಾಗೂ 64 ಡಿಎಮ್‍ಎ (DMA) ಗಳಾಗಿ ವಿಂಗಡಿಸಲಾಗಿದೆ. ಪ್ರತಿ ಜೋನನ್ನು ಪ್ರತ್ಯೇಕವಾಗಿ ಮ್ಯಾಪಿಂಗ್ ನೀರು ಸರಬರಾಜು ಕ್ಷೇತ್ರದ ಸಮೀಕ್ಷೆ ಮಾಡಲಾಗುತ್ತಿದೆ.
ಈ ಮ್ಯಾಪಿಂಗ್ ಸಮೀಕ್ಷೆ ಸಂದರ್ಭದಲ್ಲಿ ಈ ಜೋನ್‍ನಲ್ಲಿ ಬರುವ ಎಲ್ಲಾ ಗ್ರಾಹಕರ ಹಾಗೂ ಆಸ್ತಿಗಳ ಸಮೀಕ್ಷೆಯನ್ನು ಗಣಕಯಂತ್ರದ (ಟ್ಯಾಬ್) ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ಈ ಜೋನ್‍ನಲ್ಲಿರುವ ಅಧೀಕೃತ ನಳ ಸಂಪರ್ಕ ಹೊಂದಿದ ಗ್ರಾಹಕರ, ಅನಧೀಕೃತ ನಳ ಸಂಪರ್ಕದ ಗ್ರಾಹಕರ, ಹೊಸ ಸಂಪರ್ಕ ಹೊಂದುವ ಗ್ರಾಹಕರ ಹಾಗೂ ನಳ ಸಂಪರ್ಕಗಳ ವಿಧಗಳು, ಗೃಹ ಬಳಕೆಗಾಗಿ ಗೃಹೇತರ ಬಳಕೆಗಾಗಿ ಹಾಗೂ ವಾಣಿಜ್ಯ ಬಳಕೆಗಾಗಿ ವಿಂಗಡಿಸಿದ ಆ ಜೋನ್‍ನಲ್ಲಿ ಇರುವ ನೀರು ಬಳಕೆದಾರರ ಸ್ಪಷ್ಟವಾದ ಮಾಹಿತಿ ಸಹ ಸಂಗ್ರಹಿಸಲಾಗುತ್ತಿದೆ. ಅದೇ ರೀತಿ ನಳ ಸಂಪರ್ಕದ ದಾಖಲಾತಿಗಳನ್ನು ಒದಗಿಸುವಂತೆ ಮಾಹಿತಿ ಸಹ ನೀಡಲಾಗುತ್ತಿದೆ ಎಂದು ನೆರವು ಸರ್ಕಾರೇತರ ಸಂಸ್ಥೆಯ ತಂಡದ ನಾಯಕರಾದ ಕೋಟ್ರಯ್ಯ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯೋಜನಾ ಅನುಷ್ಠಾನ ಘಟಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್.ವಾಯ್. ಸಾಲಿಮನಿ, ಸಾಮಾಜಿಕ ಅಭಿವೃದ್ಧಿ ಅಧಿಕಾರಿ ನಾಗಯ್ಯಾ ಹೀರೆಮಠ, ಮೆ ಸ್ಮೆಕ್ ಕನ್ಸಲ್ಟೇನ್ಸಿಯ ಸಮಾಜಿಕ ತಜ್ಞರಾದ ಯುವರಾಜ್ ಕಟ್ಟಿಮನಿ, ಎಲ್ ಆಂಡ್ ಟಿ ಕಂಪನಿ ಸಾಮಾಜಿಕ ತಜ್ಞರಾದ ಲಿಂಗರಾಜ ಆಳಂದ, ಚಂದ್ರಶೇಖರ ಹಾಗೂ ಸರ್ಕಾರೇತರ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.







