ಕಲಬುರಗಿ | ಗಾಂಜಾ ಮಾರಾಟ : ಮೂವರ ಬಂಧನ, ಮಾಲು ಜಪ್ತಿ

ಕಲಬುರಗಿ : ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ, ಅವರ ಬಳಿ ಇದ್ದ ಸ್ವತ್ತು ಜಪ್ತಿ ಮಾಡಿಕೊಳ್ಳುವಲ್ಲಿ ಆಳಂದ ಪೊಲೀಸ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಬಾಲಚಂದ್ರ , ರಫಿಕ್ ಮತ್ತು ನಿಸಾರ್ ಎಂದು ಗುರುತಿಸಲಾಗಿದೆ.
ಆರೋಪಿಗಳು, ಆಳಂದ ಪಟ್ಡಣದ ಬಂಜಾರ ಕಿಂಗ್ಸ್ ಧಾಬಾದ ಹತ್ತಿರ ಗಾಂಜಾ ಸಾಗಾಟ ಮಾಡುವಾಗ ಆಳಂದ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಅವರಿಂದ 50 ಸಾವಿರ ರೂ. ಮೌಲ್ಯದ ಅರ್ಧ ಕೆ.ಜಿ ಗಾಂಜಾ ಮತ್ತು ಬೈಕ್ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





