ಕಲಬುರಗಿ | ಯುವತಿಯರಿಗೆ ಮೆಹಂದಿ, ಟೈಲರಿಂಗ್ ಪ್ರಮಾಣ ಪತ್ರ ವಿತರಣೆ

ಕಲಬುರಗಿ: ಎಐಐಎಂಎಸ್ ಎಜುಕೇಷನಲ್ ಚಾರಿಟೇಬಲ್ ವೆಲ್ಫೇರ್ ಟ್ರಸ್ಟ್ ಮತ್ತು ರಜಾ ಕೊಚ್ಚಾಂಗ್ ಇನ್ಸ್ಟಿಟ್ಯೂಟ್ ಆಯೋಜಿಸಿದ್ದ ಎರಡನೇ ಬ್ಯಾಚ್‌ನ ಟೈಲರಿಂಗ್ ಮತ್ತು ಮೆಹಂದಿ ತರಬೇತಿ ಪಡೆದ ಯುವತಿಯರಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ನಗರದ ಮುಸ್ಲಿಂ ಸಂಘನ ತಾಜ್ ಸ್ಕೂಲ್ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ 29 ವಿದ್ಯಾರ್ಥಿನಿಯರಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಸಾದ್ ಅಲಿ ಅನ್ಸಾರಿ ವಿತರಣೆ ಮಾಡಿ ಮಾತನಾಡಿದ ಅವರು, ಇಂದಿನ ಯುಗದಲ್ಲಿ, ಸಮಾಜದ ಅಭಿವೃದ್ಧಿಗೆ ಮಹಿಳೆಯರ ಸಬಲೀಕರಣವು ಬಹಳ ಮುಖ್ಯ. ರಝಾ ಕೋಚಿಂಗ್ ಸಂಸ್ಥೆ ಈ ಉದ್ದೇಶವನ್ನು ಉತ್ತಮವಾಗಿ ಈಡೇರಿಸುತ್ತಿದೆ ಎಂದು ಅವರು ಹೇಳಿದರು.
ಟ್ರಸ್ಟ್‌ನ ಅಧ್ಯಕ್ಷ ಸೈಯದ್ ತೈಮುದ್ದೀನ್ ಮಾತನಾಡಿ, ಸಂಸ್ಥೆಯ ಉದ್ದೇಶವು ಶಿಕ್ಷಣ, ಕೌಶಲ್ಯ ಮತ್ತು ವ್ಯಕ್ತಿತ್ವದ ವಿಕಸನದ ಮೂಲಕ ಮಹಿಳೆಯರನ್ನು ಗೌರವಯುತ ಭವಿಷ್ಯಕ್ಕಾಗಿ ಸಿದ್ಧಪಡಿಸುವುದಾಗಿದೆ ಎಂದು ಹೇಳಿದರು.
ಡಾ. ಖಾಜಿ ಹಮೀದ್ ಫೈಸಲ್ ಸಿದ್ದಿಕಿ, ನಾದಿರಾ ಬೇಗಂ, ಮೌಲಾನಾ ಜಾವೇದ್ ಅಖ್ತರ್ ಮಿಸ್ಬಾಹಿ, ಖಾಜಿ ರಿಜ್ವಾನ್-ಉರ್-ರೆಹಮಾನ್ ಸಿದ್ದಿಕಿ, ಪಾಟ್ಲಿ ಬೇಗಂ ಸಾಹಿಬ್, ರಹೀಮ್ ಮಿರ್ಚಿ, ಸೈಯದ್ ನಜೀರೊದ್ದೀನ್ ಮುತವಲಿ, ಅಕ್ಬರ್ ಅಲಾವುದ್ದೀನ್, ಮುಬೀನ್ ರಿಯಾಜ್, ನವಾಬ್ ಖಾನ್, ಡಾ.ಅಸ್ಮಾ ಪರ್ವೀನ್, ಮುಷ್ತಾಕ್ ಇಂಜಿನಿಯರ್, ತಜಮುಲ್ ಹುಸೇನ್ ನವಾಜ್ ಖಾನ್, ಅಜಮ್ ಅಲಿ ಶಮಶೋದ್ದಿನ್, ಚಾಂದ್ ಸಾಹಬ್, ಅಬ್ದುಲ್ ಜಬ್ಬಾರ್ ಗೋಲಾ, ಇಬ್ರಾಹಿಮ್, ಸುಫ್ಯಾನ್ ಖಾನ್ ಸೇರಿದಂತೆ ಮುಂತಾದವರು ಇದ್ದರು.







