ಕಲಬುರಗಿ | ಇಂಡಿಯಾ ಬೈತ್ ಅಲ್ ಮಾಲ್ ವತಿಯಿಂದ ಮುಸ್ಲಿಂ ವಧು-ವರರ ಸಮಾವೇಶ

ಕಲಬುರಗಿ : ಇಂಡಿಯಾ ಬೈತ್ ಅಲ್ ಮಾಲ್ ಟ್ರಸ್ಟ್ ಉಪಾಧ್ಯಕ್ಷರಾದ ಇಕ್ಬಾಲ್ ಅಲಿ ಅವರ ನೇತೃತ್ವದಲ್ಲಿ ಮುಸ್ಲಿಂ ವಧು-ವರರ ಸಮ್ಮಿಲನ ಸಮಾವೇಶ ನಗರದ ಹಾಗರಗಾ ಪ್ರದೇಶದಲ್ಲಿರುವ ಸಬಾ ಫಂಕ್ಷನ್ ನಲ್ಲಿ ಯಶಸ್ವಿಯಾಗಿ ಜರುಗಿತು.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಗುಲ್ಬರ್ಗಾ ಮಾತ್ರವಲ್ಲದೆ ಬೆಂಗಳೂರು, ಹುಬ್ಬಳ್ಳಿ, ಬೀಜಾಪುರ, ಯಾದಗಿರಿ, ಬೀದರ್, ವಾಡಿ, ಶಹಾಬಾದ್ ಹಾಗೂ ಶಾಹಪುರ ಮುಂತಾದ ಪ್ರದೇಶಗಳಿಂದ ಮುಸ್ಲಿಂ ವಧು-ವರರ ಪಾಲಕರು ಮತ್ತು ಪೋಷಕರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ವೈದ್ಯರು, ಇಂಜಿನಿಯರುಗಳು, ಶಿಕ್ಷಕರು, ವ್ಯಾಪಾರಿಗಳು, ಸರ್ಕಾರಿ ನೌಕರರು ಮತ್ತು ಇತರ ವಿವಿಧ ವೃತ್ತಿಗಳಲ್ಲಿರುವ ಹುಡುಗ-ಹುಡುಗಿಯರ ಮದುವೆ ಸಂಬಂಧಗಳ ಜೊತೆಗೆ ವಿಚ್ಛೇದನ ಪಡೆದ ಅಥವಾ ಖುಲಾ ಪಡೆದವರ ಮದುವೆ ಸಂಬಂಧಗಳ ಕುರಿತಾದ ಚರ್ಚೆಯೂ ನಡೆಯಿತು. ಈ ವೇಳೆ ಹಲವು ಸಂಬಂಧಗಳು ಸ್ಥಳದಲ್ಲೇ ನಿಗದಿಗೊಂಡವು.
ಸಮಾವೇಶದಲ್ಲಿ ಒಟ್ಟು 560 ಹೊಸ ನೋಂದಣಿಗಳು ಮಾಡಲ್ಪಟ್ಟಿದ್ದು, 110 ಪಾಲಕರು ಸ್ಥಳದಲ್ಲಿಯೇ ಪರಸ್ಪರ ಮಾತುಕತೆಯ ಮೂಲಕ ಸಂಬಂಧಗಳನ್ನು ನಿಗದಿಪಡಿಸಿದರು. ಸುಮಾರು 3,000ಕ್ಕೂ ಹೆಚ್ಚು ಹುಡುಗ-ಹುಡುಗಿಯರ ಪಾಲಕರು ಮತ್ತು ಸಂರಕ್ಷಕರು ಈ “ದುಬಾ ದು”ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ, ಫರಾಝ್ ಅಲ್ ಇಸ್ಲಾಂ, ಇಂಡಿಯಾ ಬೈತ್ ಅಲ್ ಮಾಲ್ ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಅಝಮ್ ಅಲಿ, ಉಪಾಧ್ಯಕ್ಷ ಇಕ್ಬಾಲ್ ಅಲಿ, ಹಮೀದ್ ಪ್ಯಾರೆ, ಬಿ.ಎಡ್. ಕಾಲೇಜಿನ ಪ್ರಿನ್ಸಿಪಲ್ ರಾಬಿಯಾ ಬೇಗಂ, ಟ್ರಸ್ಟಿ ಅಜೀಜ್ ಶಾಹಾನಾ, ವಕೀಲ ಜಬ್ಬಾರ್ ಗೊಲ್ಲಾ, ಹೈದರ್ ಅಲಿ ಬಾಗ್ಬಾನ್, ಅಬ್ದುಲ್ ಘನಿ (ಟಿಪ್ಪು ಸುಲ್ತಾನ್ ಮೆಡಿಕಲ್ ಕಾಲೇಜು), ಹಿರಿಯ ಪತ್ರಕರ್ತ ಹಕೀಮ್ ಶಾಕಿರ್, ಸಬಾ ಫಂಕ್ಷನ್ ಹಾಲ್ ನ ಮಾಲಕ ಅನ್ವರ್ ಸಾಹೇಬ್, ಸಾಮಾಜಿಕ ಕಾರ್ಯಕರ್ತ ಆಬಿದ್, ಬೀದರ್ ಶಾಹೀನ್ ಕಾಲೇಜು ಪ್ರತಿನಿಧಿ ಹಾಗೂ ಶಾಹಪುರದ ಉಮರ್ ಮರ್ಚೆಂಟ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.







