ಕಲಬುರಗಿ | ಜೇವರ್ಗಿ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ಅಧ್ಯಕ್ಷರಾಗಿ ನಾಗರಾಜ್ ದೊರೆ ಆಯ್ಕೆ

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಯುವ ಘಟಕದ ಅಧ್ಯಕ್ಷರಾಗಿ ನಾಗರಾಜ ದೇವಿಂದ್ರ ದೊರೆಗೆ ನೇಮಕ ಮಾಡಿ ವಿಭಾಗೀಯ ಯುವ ಘಟಕದ ಅಧ್ಯಕ್ಷರಾದ ನಂದುಕುಮಾರ ಪಾಟೀಲ ಅವರ ನೇತೃತ್ವದಲ್ಲಿ ಸೋಮವಾರ ಆದೇಶ ಪತ್ರ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯುವ ಘಟಕದ ಜಿಲ್ಲಾಧ್ಯಕ್ಷರಾದ ಡಾ.ರಾಮುನಾಯಕ ಅರಲಹಳ್ಳಿ, ಮಹಿಳಾ ಜಿಲ್ಲಾಧ್ಯಕ್ಷರಾದ ಡಾ. ಶುಲಾಬಾಯಿ ಕಾಳಮಂದರಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿ ದೇವಕ್ಕಿ ದೊರೆ, ತಾಲೂಕು ಅಧ್ಯಕ್ಷ ಸುರೇಶ ಕವಲ್ದಾರ್ , ವೆಂಕಟೇಶ ಕವಲ್ದಾರ್, ಬಸವರಾಜ ಹರನೂರ, ರಾಜು ದೊರೆ, ಅಂಬಲಪ್ಪ ಬುಟ್ನಾಳ್, ಸಿದ್ದು ಗುಡುರ್, ಸೇರಿದಂತೆ ಅನೇಕರು ಇದ್ದರು.
Next Story





