ಕಲಬುರಗಿ | ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಂದ್ರಶೇಖರ ಶಿಲ್ಪಿಗೆ ಕಲಬುರಗಿ ಕಸಾಪದಿಂದ ಸನ್ಮಾನ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಲ್ಪ ಕಲೆ ವೈಭವದಿಂದ ಕೂಡಿದ್ದು, ಕಲಾವಿದರಿಗೆ ಸಂಘ-ಸಂಸ್ಥೆ ಹಾಗೂ ಸರಕಾರದ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಭಾರತ ಸರ್ಕಾರದ ಜವಳಿ ಮಂತ್ರಾಲಯದ ಕರಕುಶಲ ವಿಭಾಗ ನೀಡುವ 2024 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ಶಿಲ್ಪಿ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬುಧವಾರ ಕನ್ನಡ ಭವನದ ಕಲಾ ಸೌಧದಲ್ಲಿ ಏರ್ಪಡಿಸಿದ ಗೌರವ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲೆ ಎಂಬುದು ಕೆಲವರಿಗೆ ಒಲಿದು ಬಂದಿರುತ್ತದೆ. ಅವರ ಸತತ ಶ್ರಮ ಮತ್ತು ಕೈ ಚಳಕದಿಂದ ಅದ್ಭುತ ಕಲೆ ರೂಪುಗೊಳ್ಳುತ್ತದೆ. ಇಂಥ ಕಲೆಯಿಂದ ಅನೇಕ ಕಲಾವಿದರು ಜೀವನವೇ ಮುಡುಪಾಗಿಟ್ಟು ಬದುಕುತ್ತಿದ್ದಾರೆ. ಆದರೆ ಶಿಲ್ಪ ಕಲಾವಿದರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳು ದೊರೆಯಬೇಕು. ಈ ದಿಸೆಯಲ್ಲಿ ಶಿಲ್ಪಾ ಕಲಾ ಕ್ಷೇತ್ರವನ್ನು ಶ್ರೀಮಂತಗೊಳಿಸುವ ಚಂದ್ರಶೇಖರ ಶಿಲ್ಪಿ ಅವರಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿರುವುದು ಈ ನೆಲದ ಘನತೆ ಹೆಚ್ಚಿಸಿದಂತಾಗಿದೆ ಎಂದು ಹೇಳಿದರು.
ಗೌರವ ಸಮ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ಶಿಲ್ಪಿ, ಕಲೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಅದಕ್ಕಾಗಿ ಶಿಲ್ಪಕಲಾವಿದರಿಗೆ ಇನ್ನೂ ಪ್ರೋತ್ಸಾಹ ಸಿಗಬೇಕಾಗಿದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಾನಮದ ಭಂಟನೂರ ಮಾತನಾಡಿ, ಸದ್ದಿಲ್ಲದೆ ಸಾಧನೆ ಮಾಡಿದ ಚಂದ್ರ ಶೇಖರ ಶಿಲ್ಪಿ ಯವರು ದೇಶದ ಸಂಪತ್ತಾಗಿದ್ದಾರೆ. ಅನೇಕ ಯುವ ಕರಿಗೆ ಮಾದರಿಯಾಗಿ ಕಾರ್ಯ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಸಾಪ ದ ಕಾರ್ಯದರ್ಶಿ ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ಕೇಂದ್ರ ಕಸಾಪ ಪ್ರತಿನಿಧಿ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ಕಲಾ ಸೌಧ ಸಂಚಾಲಕ ಡಾ. ರೆಹಮಾನ್ ಪಟೇಲ್, ತತ್ವಪದ ಗಾಯಕ ಅಮೃತಪ್ಪ ಅಣೂರ, ಶಿವಾನಂದ ಸುರವಸೆ, ಬಸವರಜ ಉಪ್ಪಿನ್, ವiಹ್ಮದ್ ಅಯಾಜೋದ್ದೀನ್ ಪಟೇಲ್, ಮಹಾಲಿಂಗಯ್ಯ ಸ್ವಾಮಿ, ಚಂದ್ರಕಾಂತ ಸೂರನ್, ಗಾಯತ್ರಿ ಶಿಲ್ಪಿ, ಪ್ರಭವ ಪಟ್ಟಣಕರ್, ನರಸಿಂಗರಾವ ಹೇಮನೂರ, ಶರಣು ಹಾಗರಗುಂಡಗಿ, ಅಮೃತ ಬಡಿಗೇರ, ಪದ್ಮಾವತಿ ನಾಯಕ ಸೇರಿದಂತೆ ಅನೇಕರು ಭಾಗವಹಿಸಿದ್ದರು.







