ಕಲಬುರಗಿ | ಗಾಝಾದಲ್ಲಿ ನಡೆಯುತ್ತಿರುವ ನರಮೇಧ ಖಂಡಿಸಿ ರಾಷ್ಟ್ರೀಯ ಸೌಹಾರ್ದ ದಿನ ಆಚರಣೆ

ಕಲಬುರಗಿ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಾನವ ಹತ್ಯಾಕಾಂಡ ನಿಲ್ಲಿಸುವಂತೆ ಒತ್ತಾಯಿಸಿ, ಫೆಲೆಸ್ತೀನ್ ಮತ್ತು ಇರಾನ್ ದೇಶಗಳಿಗೆ ಬೆಂಬಲಿಸಿ ಎಡಪಕ್ಷಗಳು ಕರೆ ನೀಡಿರುವ 'ರಾಷ್ಟ್ರೀಯ ಸೌಹಾರ್ದತ ದಿನ'ವನ್ನು ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಮಂಗಳವಾರ ಆಚರಿಸಲಾಯಿತು.
ಮುಖಂಡ ಮಹೇಶಕುಮಾರ್ ರಾಠೋಡ್ ಮಾತನಾಡಿ, ಅಧಿಕೃತ ಮಾಹಿತಿಗಳ ಪ್ರಕಾರ, ಗಾಝಾ ಪಟ್ಟಿಯಲ್ಲಿ 60 ಸಾವಿರಕ್ಕೂ ಹೆಚ್ಚು ಜನರ ಮಾರಣಹೋಮ ನಡೆದಿದೆ ಎಂದು ಗೊತ್ತಾಗಿದೆ, ಆದರೆ ವಾಸ್ತವದಲ್ಲಿ ಬೇರೆ ಬೇರೆ ಮಾಧ್ಯಮಗಳ ಪ್ರಕಾರ ಅಲ್ಲಿ 1.50 ಲಕ್ಷಕ್ಕೂ ಹೆಚ್ಚಿನ ಜನರನ್ನು ಕೊಲ್ಲಲಾಗಿದೆ ಎಂಬ ಅಂಶ ಬಹಿರಂಗಗೊಂಡಿದೆ. ಇಂತಹ ನರಮೇಧ ಎಸಗುತ್ತಿರುವ ಇಸ್ರೇಲ್ ರಾಷ್ಟ್ರವನ್ನು ಪ್ರಧಾನಿ ಮೋದಿ ಬೆಂಬಲಿಸುವುದು ಸರಿಯಲ್ಲ ಎಂದು ಆರೋಪಿಸಿದರು.
ಹೋರಾಟಗಾರ್ತಿ ಕೆ.ನೀಲಾ ಮಾತನಾಡಿದರು.
ಈ ಸಂದರ್ಭದಲ್ಲಿ CPI ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶ್ ಕುಮಾರ್ ರಾಥೋಡ್ CPI(M) ಪಕ್ಷದ ಜಿಲ್ಲಾ ಕಾರ್ಯದರ್ಶಿ ನೀಲಾ ಕೆ. ಹಾಗೂ SUCI(C) ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಎಸ್.ಎಂ.ಶರ್ಮಾ ರವರು ಇಂದಿನ ಸೌಹಾರ್ದತಾ ಸಭೆಯ ನೇತೃತ್ವವನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಭೀಮಾಶಂಕರ ಮಾಡಿಯಾಳ್, ಮೌಲಾ ಮುಲ್ಲಾ, ಪ್ರಭುದೇವ ಯಳಸಂಗಿ, ಮೀನಾಕ್ಷಿ ಬಾಳಿ, ಸುಧಾಮ ಧನ್ನಿ, ಮಹೇಶ್ ಎಸ್.ಬಿ., ಸೀಮಾ ದೇಶಪಾಂಡೆ, ಜಗನ್ನಾಥ್ ಎಸ್.ಎಚ್., ಶ್ರೀಮಂತ ಬಿರಾದರ್, ಪದ್ಮಿನಿ ಕಿರಣಗಿ, ಮಹೇಶ್ ನಾಡಗೌಡ, ಶರಣು ಹೇರೂರು, ಸಂತೋಷ್ ಕುಮಾರ್ ಹಿರವೆ, ಲವಿತ್ರ ವಸ್ತ್ರದ್, ಸುಜಾತಾ ಸೇರಿದಂತೆ ಹಲವರು ಭಾಗವಹಿಸಿದ್ದರು.







