ಕಲಬುರಗಿ | ರಾಷ್ಟ್ರೀಯ ಮಟ್ಟದ ʼಕೃಷಿ ಡ್ರೋನ್ ಪೈಲಟ್ʼ ತರಬೇತಿ

ಕಲಬುರಗಿ : ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು ಕೃಷಿ ಮಹಾವಿದ್ಯಾಲಯ, ಕಲಬುರಗಿ ಹಾಗೂ ಎಕ್ಸೆಲಿಜೆಂಟ್ ಟೆಕ್ನೊ ಪವರ ಪ್ರೈವೇಟ್ ಲಿಮಿಟೆಡ್, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಐದು (5) ದಿನಗಳ ರಾಷ್ಟ್ರೀಯ ಮಟ್ಟದ ಕೃಷಿ ಡ್ರೋನ್ ಪೈಲಟ್ ತರಬೇತಿ – 2025 ಅನ್ನು ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ಆವರಣದಲ್ಲಿ ಆಯೋಜಿಸಲಾಗಿತ್ತು.
ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಜಂಟಿ ಕೃಷಿ ನಿರ್ದೇಶಕರಾದ ಡಾ.ಸಮದ್ ಪಟೇಲ್, ಕೃಷಿಯಲ್ಲಿ ಡ್ರೋನ್ ಬಳಕೆ ಈಗ ಅನಿವಾರ್ಯವಾಗಿದೆ. ಮಾನವ ಸಂಪನ್ಮೂಲದ ಕಡಿಮೆ ಬಳಕೆ ಮಾಡಿ ನಿಖರವಾಗಿ ಬೆಳೆ ಸಂರಕ್ಷಣೆ ಹಾಗೂ ಪರಿಸರ ಸಂರಕ್ಷಣೆಯಲ್ಲಿ ಕಡಿಮೆ ರಸಾಯನಿಕಗಳ ಬಳಕೆ ಮಾಡಲು ಡ್ರೋನ್‍ಗಳು ಸಹಕಾರಿಯಾಗಲಿವೆ. ಕೃಷಿ ಇಲಾಖೆಯಿಂದ ವಿವಿಧ (ಸೌಲಭ್ಯ) ಪಡೆಯಲು ಅನುಕೂಲವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ಮಹಾವಿದ್ಯಾಲಯದ ಕಲಬುರಗಿ ಡೀನ್ ಡಾ.ಶಿವಶರಣಪ್ಪ ಬಿ.ಗೌಡಪ್ಪ, ಮಾನವ ರಹಿತ ವಾಹನ ಈ ಡ್ರೋನ್ ಗಳು ಬಗ್ಗೆ ರೈತರು ಹಾಗೂ ನಿರುದ್ಯೋಗಿ ಯುವಕ-ಯುವತಿಯರು ಹಾಗೂ ವಿದ್ಯಾರ್ಥಿಗಳಿಗೆ ಸ್ವಂ ಉದ್ಯೋಗ ಕೈಗೊಳ್ಳಲು ಸಹಕಾರಿಯಾಗುವ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮವಾಗಿ ಆಯೋಜಿಸಿದ್ದು, ಈ ವಿನೂತನ ತರಬೇತಿಯು ಪ್ರಾಯೋಗಿಕವಾಗಿದ್ದು, ಶಿಬಿರಾರ್ಥಿಗಳು ಡ್ರೋನ್‍ಗಳ ಚಾಲನೆ ಸಮಗ್ರ ಮಾಹಿತಿ ಪಡೆಯಲು ಅನುಕೂಲವಾಗಲಿದೆ ಎಂದರು.
ತರಬೇತಿಯ ನಿರ್ದೇಶಕರಾದ ಹಾಗೂ ಪ್ರಾಧ್ಯಾಪಕರಾದ ಡಾ.ರಾಚಪ್ಪ ಹಾವೇರಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ.ರಾಜು ತೆಗ್ಗಳ್ಳಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿಯ ಉಪ ಕೃಷಿ ನಿರ್ದೇಶಕರಾದ ಅನುಸುಯಾ ಹೂಗಾರ್, ಸೋಮಶೇಖರ್ ಬಿರಾದರ್, ಡಾ.ಎಸ್.ಕೆ. ಜಯಲಕ್ಷ್ಮೀ, ಡಾ.ಬಿ.ಎಸ್. ರೆಡ್ಡಿ, ಡಾ.ಸುನಿಲಕುಮಾರ ಎನ್.ಎಮ್., ಡಾ.ಸಿದ್ರಾಮ ವಾಡೇದ್, ಡಾ.ಸತೀಶಕುಮಾರ, ಡಾ.ಮಹೇಶ, ಡಾ.ರಾಜಶೇಖರ ಬಸನಾಯಕ, ತರಬೇತಿ ನಿರ್ದೇಶಕರಾದ ಡಾ.ಕುಶಾಲ ಕುಮಾರ ಪೊದ್ದಾರ್ ಮತ್ತು ಶುಭಮ್ ಗಾಯಕವಾಡ್ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.







